ಕ್ರಿಕೆಟಿಗ ಕೆ.ಸಿ ಕಾರಿಯಪ್ಪ ವಿರುದ್ದ ಪ್ರೀತಿಸಿ ವಂಚಿಸಿದ ಆರೋಪ: ದೂರು, ಪ್ರತಿದೂರು ದಾಖಲು.

ಬೆಂಗಳೂರು,ಡಿಸೆಂಬರ್,25,2023(www.justkannada.in): ಕರ್ನಾಟಕದ ಕ್ರಿಕೆಟಿಗ ಕೆ.ಸಿ ಕಾರಿಯಪ್ಪ ಅವರ ವಿರುದ್ದ ಪ್ರೀತಿಸಿ ವಂಚಿಸಿದ ಆರೋಪ ಕೇಳಿ ಬಂದಿದ್ದು ಈ ಸಂಬಂಧ ಅವರ ಮಾಜಿ ಪ್ರೇಯಸಿ ಆರ್ .ಟಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನು ಕೆ.ಸಿ ಕಾರಿಯಪ್ಪ ಅವರೂ ಸಹ ಮಾಜಿ ಪ್ರೇಯಸಿ ವಿರುದ್ದ ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

ಮದುವೆಯಾಗುವುದಾಗಿ  ನಂಬಿಸಿ ಬಳಸಿಕೊಂಡು, ಈಗ ಮೋಸ ಮಾಡಿದ್ದಾರೆ ಎಂದು ಕಾರಿಯಪ್ಪ ಅವರ ಮಾಜಿ ಪ್ರಿಯತಮೆ ಆರ್‌.ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.  ನನಗೆ ಗರ್ಭಪಾತ ಮಾಡಿಸಿಕೊಳ್ಳಲು ಹೇಳಿದ್ದರು.  ನಾನು  ಮಗು ಬೇಕು ಅಂತಾ ಒತ್ತಾಯಿಸಿದ್ದೆ. ಆದರೆ ಬಲವಂತವಾಗಿ ನನಗೆ ಮಾತ್ರೆ ಕುಡಿಸಿದರು. ನನಗೆ ತುಂಬಾ ಮಾನಸಿಕವಾಗಿ ನೋವು ನೀಡಿದ್ದಾರೆ.  ದೂರು ಕೊಟ್ಟಾಗಲೆಲ್ಲ ರಾಜಿ ಮಾಡಿಕೊಂಡರು  ಎಂದು ಕೆ.ಸಿ ಕಾರಿಯಪ್ಪ ವಿರುದ್ದ ಮಾಜಿ ಪ್ರೇಯಸಿ ಆರೋಪ ಮಾಡಿದ್ದಾರೆ.

ಇನ್ನು ಕ್ರಿಕೆಟಿಗ ಕೆ.ಸಿ ಕಾರಿಯಪ್ಪ ಅವರು ಕೂಡಾ  ಮಾಜಿ ಪ್ರೇಯಸಿ ವಿರುದ್ದ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಾನು ಕಷ್ಟ ಪಟ್ಟು ಮೇಲೆ ಬಂದಿದ್ದೇನೆ. ಆಕೆಗೆ ನಾನೇ ಟಾರ್ಗೆಟ್.  ನಾನು ಮೊದಲು ಪ್ರೀತಿಸಿದ್ದು ನಿಜ. ಆದರೆ ಆಕೆ ಸ್ವಭಾವ ಸರಿ ಇಲ್ಲ. ಆಕೆ ಡ್ರಗ್ಸ್ ಸೇವಿಸುತ್ತಾಳೆ. ಯಾರ್ಯಾರೋ ಜೊತೆ ಇರುತ್ತಾಳೆ. ಅವಳಿಗೆ ನನ್ನ ಕ್ರಿಕೆಟ್ ಕರಿಯರ್ ಹಾಳಾಗಬೇಕು ಅಷ್ಟೆ. ಒಂದೂವರೆ ವರ್ಷದ ಹಿಂದೆಯೇ ಆಕೆಯೊಂದಿಗೆ ನಾನು ಬ್ರೇಕ್‌ ಅಪ್ ಮಾಡಿಕೊಂಡಿದ್ದೇನೆ. ಆಕೆ ಅಭ್ಯಾಸಗಳು ಸರಿಯಿಲ್ಲ. ಈಗ ನನ್ನ ಕ್ರಿಕೆಟ್ ಭವಿಷ್ಯ ಹಾಳು ಮಾಡುತ್ತೇನೆ ಎಂದು ಗಲಾಟೆ ಮಾಡುತ್ತಿದ್ದಾಳೆ. ನನ್ನ ಮನೆ ಬಳಿ ಬಂದು ಗಲಾಟೆ ಮಾಡುತ್ತಾಳೆ ಎಂದು ಕೆ.ಸಿ ಕಾರಿಯಪ್ಪ ಆರೋಪಿಸಿದ್ದಾರೆ.

Key words: Cricketer- KC Cariappa’- cheating –allegation-Complaint