ಕಬ್ಬಿನ ಬೆಳೆಗೆ ಎರಡು ಬಾರಿ ನೀರು ಹರಿಸುವಂತೆ ಸಚಿವರಿಗೆ ಮನವಿ ಮಾಡಿದ ಮಾಜಿ ಸಚಿವ ಹೆಚ್.ಡಿ ರೇವಣ್ಣ….

ಬೆಂಗಳೂರು,ಆ,10,2020(www.justkannada.in):   ವಿಕಾಸಸೌಧದಲ್ಲಿ ಇಂದು ಕಾವೇರಿ ನೀರಾವರಿ ನಿಗಮ ನಿಯಮಿತ, ಹೇಮಾವತಿ ನೀರಾವರಿ ಸಲಹಾ ಸಮಿತಿ ಸಭೆ ನಡೆಯಿತು. ಕಬ್ಬಿನ ಬೆಳೆಗೆ ಎರಡು ಬಾರಿ ನೀರು ಹರಿಸುವಂತೆ ಸಚಿವರಿಗೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಮನವಿ ಸಲ್ಲಿಸಿದರು.jk-logo-justkannada-logo

ಕಾನೂನು ಸಚಿವ ಮಾಧುಸ್ವಾಮಿ, ಆಹಾರ ಸಚಿವ ಗೋಪಾಲಯ್ಯ ನೇತೃತ್ವದಲ್ಲಿ  ವಿಕಾಸಸೌಧದಲ್ಲಿ ಕಾವೇರಿ ನೀರಾವರಿ ನಿಗಮ ನಿಯಮಿತ, ಹೇಮಾವತಿ ನೀರಾವರಿ ಸಲಹಾ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ  ಹಾಸನ ಸಂಸದ ಪ್ರಜ್ವಲ್ ರೇವಣ್ಣ, ಹಾಗೂ ತುಮಕೂರು ಸಂಸದ ಬಸವರಾಜ್, ಡಿ ಕೆ ಸುರೇಶ್ ಹಾಗೂ ಮಾಜಿ ಸಚಿವ ಹೆಚ್.ಡಿ ರೇವಣ್ಣ,  ಸಿ.ಎಸ್ ಪುಟ್ಟರಾಜು ಶಾಸಕರಾದ ಎ ಟಿ ರಾಮಸ್ವಾಮಿ, ಹೆಚ್ ಡಿ ರೇವಣ್ಣ, ರಂಗನಾಥ್ , ಮಂಡ್ಯ, ಹಾಸನ, ತುಮಕೂರು ಜನಪ್ರತಿನಿಧಿಗಳು ಅಧಿಕಾರಿಗಳು ಭಾಗಿಯಾಗಿದ್ದರು.former-minister-hd-revanna-appeals-minister-water-crop-twice

ಸಭೆಯಲ್ಲಿ ಬೆಂಬಲ ಬೆಲೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಕಬ್ಬಿನ ಬೆಳೆಗೆ ಎರಡು ಬಾರಿ ನೀರು ಹರಿಸುವುದಕ್ಕಾಗಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು ಸಚಿವರಲ್ಲಿ ಮನವಿ ಮಾಡಿದರು.

Key words: Former Minister- HD Revanna- appeals – minister -water -crop twice