ದೇಗುಲ ತೆರವು ವಿಚಾರ: ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ  ಸಂಸದ ಪ್ರತಾಪ್ ಸಿಂಹ.

ಮೈಸೂರು,ಸೆಪ್ಟಂಬರ್,17,2021(www.justkannada.in):  ನಿಮಗೆ ಈಗ ದೇಗುಲದ ಮೇಲೆ ಪ್ರೀತಿ ಕಾಳಜಿ ಬಂದಿದೆ. ನಿಮಗೆ ಪ್ರೀತಿ ಕಾಳಜಿ ಇದ್ದಿದ್ರೆ ವಿಗ್ರಹ ಕಳ್ಳ ಟಿಪ್ಪು ಜಯಂತಿ ಮಾಡ್ತಿರಲಿಲ್ಲ. ಲಿಂಗಾಯತರನ್ನು ಒಡೆಯುವ ಕೆಲಸ ಮಾಡುತ್ತಿರಲಿಲ್ಲ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ವಿರುದ್ಧ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದರು.

ರಾಜ್ಯದಲ್ಲಿ ದೇವಾಲಯ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ  ಬಿಜೆಪಿ ಸಂಸದ ಪ್ರತಾಪ್ ಸಿಂಹ, ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಕೋರ್ಟ್ ಆದೇಶ ನೀಡಿತ್ತು. ನೀವು ವಕೀಲರಾಗಿದ್ದೀರಿ, ಏಕೆ ನೀವು ಗಮನಹರಿಸಲಿಲ್ಲ..? ಎಂದು ಸಿದ್ಧರಾಮಯ್ಯಗೆ ಪ್ರಶ್ನಿಸಿದರು.

ಹಾಗೆಯೇ  ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೂ ಲೋಪವಾಗಿದೆ. ಸಿದ್ದರಾಮಯ್ಯ ಸರ್ಕಾರ ಇದ್ದಾಗಲೂ ಲೋಪವಾಗಿದೆ. ಅಧಿಕಾರಿಗಳ ತಪ್ಪಿನಿಂದ ಈಗ ರಾಜಕಾರಣಿಗಳಿಂದ ಪರಸ್ಪರ ಆರೋಪ-ಪ್ರತ್ಯಾರೋಪವಾಗುತ್ತಿದೆ. ಇದೇ ರೀತಿ ಮಾಡಿಕೊಂಡು ಕಾಲಹರಣ ಮಾಡಬೇಡಿ. ಸಿದ್ದರಾಮಯ್ಯನವರೇ ರಾಜಕೀಯಕ್ಕಾಗಿ ಆರೋಪ ಬೇಡ. ನಿಮ್ಮ ಕಾಲದಲ್ಲಿಯೇ ಲೋಪ ಸರಿಪಡಿಸಬಹುದಾಗಿತ್ತು. ಈಗ ಇದ್ದಕ್ಕಿದ್ದಂತೆ ಕಾಳಜಿ, ಪ್ರೀತಿ ವ್ಯಕ್ತವಾಗುತ್ತಿದೆ. ಪ್ರೀತಿ, ಕಾಳಜಿ ಇದ್ದಿದ್ದರೆ ವಿಗ್ರಹ ಕಳ್ಳ ಟಿಪ್ಪು ಸುಲ್ತಾನ್ ಜಯಂತಿ ಮಾಡುತ್ತಿರಲಿಲ್ಲ. ಲಿಂಗಾಯತರನ್ನು ಒಡೆಯುವ ಕೆಲಸ ಮಾಡುತ್ತಿರಲಿಲ್ಲ. ಇದರಲ್ಲಿ ಬ್ಯುಸಿ ಆಗಿದ್ದರಿಂದ ನಿಮಗೆ ಅರ್ಥ ಆಗಿಲ್ಲ. ಈಗ ಸುಮ್ಮನೆ ಪ್ರೀತಿ ವಿಶ್ವಾಸವಿದೆ ಎಂದು ಬಿಂಬಿಸಿಕೊಳ್ಳಬೇಡಿ. ತಪ್ಪು ಎಲ್ಲ ಕಡೆಯಿಂದಲೂ ಆಗಿದೆ ಅನ್ನೋದನ್ನು ಒಪ್ಪಿಕೊಳ್ಳಿ ನೀವು ನೀವು ಹೊಡೆದಾಡದೆ ಎಲ್ಲರ ಭಾವನೆ ಗೌರವಿಸಿ. ಎಲ್ಲರೂ ವಿಶ್ವಾಸದಿಂದ ನಿರ್ಧಾರವನ್ನು ತೆಗೆದುಕೊಳ್ಳಿ ಯಾರ ಮೇಲೂ ಗೂಬೆ ಕೂರಿಸಲು ನಾನು ಬಂದಿಲ್ಲ  ಎಂದು ನುಡಿದರು.

ಹರದನಹಳ್ಳಿ ಮಹದೇವಮ್ಮ ದೇಗುಲ ತೆರವು ವೇಳೆ ನಿಯಮಗಳನ್ನು ಪಾಲನೆ ಮಾಡಿಲ್ಲ. ಹೀಗಾಗಿ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯ ಮಾಡ್ತಿದ್ದೇನೆ. ನನಗೆ ಮುಖ್ಯಮಂತ್ರಿ ಬೊಮ್ಮಾಯಿ ಮೇಲೆ ನಂಬಿಕೆ ಇದೆ. ಸಿಎಂ ಬೊಮ್ಮಾಯಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

Key words:  temple-clearence- issue- MP-Pratap Simha -against –formerCM-Siddaramaiah.

ENGLISH SUMMARY…

Temple demolition case: MP Pratap Simha expresses displeasure against former CM Siddaramaiah
Mysuru, September 17, 2021 (www.justkannada.in): Mysuru and Kodagu MP Pratap Simha has expressed his displeasure against the former Chief Minister Siddaramaiah. In his response to the former CM’s views on the temple demolition case in Mysuru, he said, “All of a sudden you are expressing love for a temple. If you really had concern you wouldn’t had allowed to celebrate Tipu Jayanti in the state, you wouldn’t have attempted to divide the Lingayat community people,” he said.
Addressing a press meet in Mysuru today he informed that the court had issued orders when Siddaramaiah was the Chief Minister. “You were an advocate, why didn’t you address it?,” he questioned.
Further speaking he confessed that drawbacks have been found both during the term of BJP and the Congress governments in the state. “Due to the fault of officials politicians are indulged in mud-slinging against each other. However, I request please don’t continue and waste time in accusing each other. Please don’t make allegations just because of political gains. You could have set right the fault when you were in power. But suddenly you are expressing a lot of concern. Please don’t exhibit false love, please learn to respect the sentiments of all,” he said.
“No rules have been broke with respect to the Haradanahalli Mahadevamma temple. Hence, I am requesting the Chief Minister Basavaraj Bommai to withdraw the orders. I have complete faith in the Chief Minister, let him take the right decision,” he added.
Keywords: MP Pratap Simha/ temple demolition/ displeasure/ Siddaramaiah