ಮಕ್ಕಳಿಗಾಗಿ ಶಾಲೆ ಆರಂಭಿಸಲು ನಟಿ ಸನ್ನಿ ಲಿಯೋನ್ ಸಿದ್ಧತೆ

ಮುಂಬೈ, ಜೂನ್ 26, 2019 (www.justkannada.in): ನಟಿ ಸನ್ನಿ ಲಿಯೋನ್ ಮಕ್ಕಳಿಗಾಗಿ ಶಾಲೆಯೊಂದನ್ನು ತೆರೆಯಲಿದ್ದಾರೆ.

ಶೀಘ್ರವೇ ಶಿಕ್ಷಣ ರಂಗಕ್ಕೂ ಕಾಲಿಡಲು ಸಜ್ಜಾಗಿರುವ ಸನ್ನಿ ಲಿಯೋನ್, ಈಗಾಗಲೇ ಮೂರು ಮಕ್ಕಳನ್ನು ದತ್ತು ಪಡೆದು ಸಾಕಷ್ಟು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಇದೀಗ ಸ್ವಂತ ಶಾಲಾ ಕಟ್ಟಡದ ವಿನ್ಯಾಸ, ಒಳಾಂಗಣ ಹಾಗೂ ವಿವಿಧ ಸೌಲಭ್ಯಗಳ ಕುರಿತು ರೂಪುರೇಷೆ ತಯಾರಿಸಿದ್ದಾರೆ. ಅಂದಹಾಗೆ ಇದು ಸನ್ನಿ ಹಾಗೂ ಅವರ ಪತಿಯ ಕನಸಿನ ಕೂಸಂತೆ. ಶಾಲೆಯಲ್ಲಿ ಮಕ್ಕಳು ಆಟವಾಡಲು ಹಾಗೂ ಸಮ್ಮೇಳನ ಏರ್ಪಡಿಸಲು ಅವಕಾಶವಿರಲಿದೆ.