ಮೀಸಲಾತಿ ಹೋರಾಟಕ್ಕೆ ಕಿಚ್ಚ ಬೆಂಬಲ !

ಬೆಂಗಳೂರು, ಜೂನ್ 26, 2019 (www.justkannada.in): ಪರಿಶಿಷ್ಟ ಪಂಗಡಕ್ಕೆ ಶೇ 7.5 ಮೀಸಲಾತಿ ನೀಡುವಂತೆ ಆಗ್ರಹಿಸಿ ವಾಲ್ಮೀಕಿ ಸಮುದಾಯ ನಡೆಸುತ್ತಿರುವ ಪ್ರತಿಭಟನಗೆ ನಟ ಕಿಚ್ಚ ಸುದೀಪ್ ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮೂಲಕ ಸಂದೇಶ ರವಾನಿಸಿರುವ ಅವರು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.

ಪರಿಶಿಷ್ಠ ಪಂಗಡದವರಿಗೆ ಶೇ.7.5ರಷ್ಟು ಮಿಸಲಾತಿಗೆ ಒತ್ತಾಯಿಸಿ ಬೃಹತ್ ಧರಣಿ ಆರಂಭವಾಗಿತ್ತು. ಪ್ರಸನ್ನಾನಂದ ಪುರಿ ಸ್ವಾಮೀಜಿ ಹಾಗೂ ಸ್ನೇಹಿತರಿಗೆ ನನ್ನ ಬೆಂಬಲವಿದೆ ಎಂದು ಸುದೀಪ್ ಟ್ವಿಟ್ಟರ್ ನಲ್ಲಿ ಹೇಳಿದ್ದಾರೆ.