ಪತ್ರಕರ್ತ ರವಿ ಪಾಂಡವಪುರ ಬರೆದಿರುವ ಪುಸ್ತಕಗಳ ಬಿಡುಗಡೆ ಇಂದು

ಮೈಸೂರು, ಜೂನ್ 26, 2019 (www.justkannada.in): ಪತ್ರಕರ್ತ ರವಿ ಪಾಂಡವಪುರ ಬರೆದಿರುವ ಎರಡು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಇಂದು ಸಂಜೆ ನಡೆಯಲಿದೆ.

ಇಂದು ಸಂಜೆ 4.30ಕ್ಕೆ ಮೈಸೂರು ವಿವಿ ರಾಣಿ ಬಹದ್ದೂರ್ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ‘ರೈಟ್ ರೈಟ್’ ಹಾಗೂ ‘ಅಯ್ಯೋ ದ್ಯಾವ್ರೆ’ ಪುಸ್ತಕಗಳನ್ನು ಶಾಸಕ ಎಚ್.ವಿಶ್ವನಾಥ್ ಬಿಡುಗಡೆ ಮಾಡಲಿದ್ದಾರೆ.

ಹಿರಿಯ ಸಾಹಿತಿ ಸಿಪಿಕೆ ಅಧ್ಯಕ್ಷತೆ ವಹಿಸಲಿದ್ದು, ಪ್ರೊ.ಭಾಷ್ಯಂ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಸಂವಹನ ಪ್ರಕಾಶಕರಾದ ಡಿ.ಎನ್.ಲೋಕಪ್ಪ ಅವರು ಪಾಲ್ಗೊಳ್ಳಲಿದ್ದಾರೆ.