ಜಮ್ಮು ಮತ್ತು ಕಾಶ್ಮೀರದಲ್ಲಿ ಎನ್ಐಎ ಕಾರ್ಯಾಚರಣೆ: ಭಯೋತ್ಪಾದನಾ ಸಂಬಂಧಿತ 16 ಸ್ಥಳಗಳಲ್ಲಿ ದಾಳಿ

ಬೆಂಗಳೂರು, ಅಕ್ಟೋಬರ್ 10, 2021 (www.justkannada.in): ರಾಷ್ಟ್ರೀಯ ತನಿಖಾ ಸಂಸ್ಥೆ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ 16 ಸ್ಥಳಗಳಲ್ಲಿ ದಾಳಿ ನಡೆಸಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ಸಂಬಂಧಿತ ಚಟುವಟಿಕೆಗಳ ಮೇಲೆ ಭಾರಿ ದಬ್ಬಾಳಿಕೆ ನಡೆದ ಬೆನ್ನಲ್ಲೆ ರಾಷ್ಟ್ರೀಯ ತನಿಖಾ ಸಂಸ್ಥೆ ಕಾರ್ಯಾಚರಣೆ ಪ್ರಾರಂಭಿಸಿದೆ.

ಐಸಿಸ್-ವಾಯ್ಸ್ ಆಫ್ ಹಿಂದ್ ಪ್ರಕರಣದ ತನಿಖೆಯ ಭಾಗವಾಗಿ ಶ್ರೀನಗರ, ಅನಂತನಾಗ್, ಕುಲ್ಗಾಮ್ ಮತ್ತು ಬಾರಾಮುಲ್ಲಾದ ಒಂಬತ್ತು ಸ್ಥಳಗಳಲ್ಲಿ ಭಯೋತ್ಪಾದನಾ ನಿಗ್ರಹ ಸಂಸ್ಥೆ ದಾಳಿ ನಡೆಸಿದೆ.

ಭಯೋತ್ಪಾದಕ ಸಂಘಟನೆ ಫೆಬ್ರವರಿ 2020 ರಿಂದ ‘ವಾಯ್ಸ್ ಆಫ್ ಹಿಂದ್’ ಹೆಸರಿನ ಆನ್ ಲೈನ್ ಮಾಸಿಕ ಭಾರತ ಕೇಂದ್ರಿತ ನಿಯತಕಾಲಿಕೆಯನ್ನು ಬಿಡುಗಡೆ ಮಾಡುತ್ತಿದೆ, ಇದು ಕಣಿವೆಯಲ್ಲಿ ಮುಸ್ಲಿಂ ಯುವಕರ ದೊಡ್ಡ ಪ್ರಮಾಣದ ತೀವ್ರಗಾಮಿತ್ವದ ಚಿಲುಮೆಯಾಗಿ ಹೊರಹೊಮ್ಮಿದೆ.

key words: NIA operations in Jammu and Kashmir, attacks on 16 terrorist-related locations