ಯಾರು ಅವನು, ಅವನಿಗೆ  ಏನ್ ಗೊತ್ತಿದೆ..? ನಿನ್ನೆ ಮೊನ್ನೆ ಹುಡುಗನಿಗೆ ಯಾಕೆ ಇಷ್ಟೊಂದು ಪ್ರಾಮುಖ್ಯತೆ- ಸಿಎಂ ಬಿಎಸ್ ವೈ ಪುತ್ರನ ವಿರುದ್ದ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ…

ಮೈಸೂರು,ಅ,4,2019(www.justkannada.in): ಸಿದ್ದರಾಮಯ್ಯ  ಮತ್ತು ಹೆಚ್.ಡಿ ಕುಮಾರಸ್ವಾಮಿ ಆಳ್ವಿಕೆಯಲ್ಲಿ  ರಾಜ್ಯದ ಬೊಕ್ಕಸ ಖಾಲಿಯಾಗಿದೆ ಎಂದು ಹೇಳಿಕೆ ನೀಡಿದ್ದ ಸಿಎಂ ಬಿಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ವಿರುದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಯಾರು ಅವನು ಅವನಿಗೆ  ಏನ್ ಗೊತ್ತಿದೆ..? ನಿನ್ನೆ ಮೊನ್ನೆ ಹುಡುಗನಿಗೆ ಯಾಕೆ ಇಷ್ಟೊಂದು ಪ್ರಾಮುಖ್ಯತೆ ಕೊಟ್ಟಿದ್ದಾರೆ. ಬೊಕ್ಕಸ ಖಾಲಿ ಬಗ್ಗೆ ಮಾತನಾಡೋಕೆ ಆ ಹುಡುಗ ಯಾರು..?  ತನ್ನ ಬೊಕ್ಕಸ ತುಂಬಿಸಿಕೊಳ್ಳಲು ಬಿಜೆಪಿ ಪಕ್ಷದ ನಾಯಕ ಅಂತಾ ಬಿಂಬಿಸಿಕೊಳ್ಳುತ್ತಿದ್ದಾನೆ ಅಷ್ಟೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದರು.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಬಹುಶಃ ವಿಜಯೇಂದ್ರನ ಬೊಕ್ಕಸ ಖಾಲಿಯಾಗಿದೆ. ನಿನ್ನೆ ಮೊನ್ನೆ ಬಂದವನಿಗೆ  ಪ್ರಾಮುಖ್ಯತೆ ಕೊಡುವ ಅಗತ್ಯವಿಲ್ಲ. ಅವನಿಗೆ ಎನ್ ಗೊತ್ತು ದುಡ್ಡು ಲಪಟಾಯಿಸೋದು  ಮಾತ್ರ  ಗೊತ್ತಿರೋದು. ಬೊಕ್ಕಸ ಇಲ್ಲದಿರುವುದು  ಅಥವಾ  ಖಾಲಿ ಆಗಿರುವುದು ಆ ಹುಡುಗನಿಗೆ ಏನ್ ಗೊತ್ತು,  ತನ್ನ ಬೊಕ್ಕಸ ತುಂಬಿಸಿ  ಕೊಳ್ಳಲು ಓಡಾಡುತ್ತಿದ್ದಾನೆ ಅಷ್ಟೇ ಎಂದು ಹರಿಹಾಯ್ದರು.

ಕೇಂದ್ರದ ನೆರವಿಲ್ಲದೆ ರಾಜ್ಯ ಸರ್ಕಾರ ನೆರೆ ಪರಿಹಾರ ನೀಡಬಹುದು. ಉದಾಹರಣೆಗೆ ಕಳೆದ ಎರೆಡು ಬಜೆಟ್ ನಲ್ಲಿ  ಸಾಲಮನ್ನಾ ಮಾಡಲು ಜಾರಿಗೆ ತಂದ ಬಜೆಟ್ ನಲ್ಲಿ 25 ಸಾವಿರ ಕೋಟಿ ಇಟ್ಟಿದ್ದೆ. ಅದರಲ್ಲಿ ಇನ್ನೋ ಐದಾರು ಸಾವಿರ ಕೋಟಿ ಉಳಿದು ಕೊಂಡಿದೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಮಡಿಕೇರಿಯಲ್ಲಿ ನೆರೆ ಬಂದಿತ್ತು ಆಗ ನಾನು ಕೇಂದ್ರದ ನೆರೆ ಪರಿಹಾರಕ್ಕೆ ಕಾದು ಕುಳಿತಿದ್ನಾ.? ಇವತ್ತು ಎನ್ ಡಿ ಆರ್ ಎಫ್ ಗೈಡ್ ಲೈನ್ಸ್ ಪ್ರಕಾರ ಹೋದ್ರೆ. ನೆರೆಗೆ ಸಿಲುಕಿರುವ ಕುಟುಂಬಗಳು ಸರ್ವನಾಶವಾಗುತ್ತದೆ. ನಾನು ಕೊಡುಗಿನಲ್ಲಿ ಯಾವರೀತಿ ಪರಿಹಾರ ಕೊಟ್ಟಿದ್ದೇನೆ ಅದನ್ನು ಗಮನಿಸಲಿ ಎಂದು ಸಲಹೆ ನೀಡಿದರು.

ಕೊಡಗು ಪ್ರವಾಹದ ವೇಳೆ ನನ್ನ ಸಂಪರ್ಕದಲ್ಲಿ ಪ್ರಧಾನಿ ನರೇಂದ್ರಮೋದಿ ಜತೆಗಿದ್ದರು. ಎಲ್ಲಾ ಸಂಧರ್ಭದಲ್ಲಿ ನನಗೆ ಸಹಕಾರ ಕೊಟ್ಟಿದ್ದಾರೆ. ಇಲ್ಲಿ ಬಿಜೆಪಿ ಯಡಿಯೂರಪ್ಪ ಹಾಗೂ ನರೇಂದ್ರ ಮೋದಿಗೆ ಸಮನ್ವಯ ಕೊರತೆ ಇದೆ. ನಾವು ಕಳೆದ ಬಜೆಟ್ ನಲ್ಲಿ ನೆರೆ ಪರಿಹಾರಕ್ಕೆ ಯಾವ ರೀತಿ ತೆರಿಗೆ ಸಂಗ್ರಹಿಸಬೇಕು ಅಂತ ಗುರಿ ಇಟ್ವಿದ್ವಿ. ಅಧಿಕಾರಿಗಳ ಜತೆ ನಾವು ಉತ್ತಮ ರೀತಿಯಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡಿದ್ವಿ. ನಾವು ಅಧಿಕಾರಿಗಳ ಜತೆ ಮಾತಾಡಿ ಟಾರ್ಗೆಟ್ ನೀಡಿದ್ವಿ ಇವತ್ತು ಈ ನೆರೆ ಪರಿಹಾರ ನಿಭಾಯಿಸುವಲ್ಲಿ ವಿಫಲತೆಗೆ ಯಡಿಯೂರಪ್ಪ ನಡವಳಿಕೆಗಳೇ ಕಾರಣ ಎಂದು ಹೆಚ್.ಡಿಕೆ ಆರೋಪಿಸಿದರು.

ಬಿಎಸ್ ವೈ ಅಧಿಕಾರಿಗಳ ಜತೆ ಸರಿಯಾದ ರೀತಿಯಲ್ಲಿ ವಿಶ್ವಾಸ ಇಟ್ಟುಕೊಂಡಿಲ್ಲ. ಇವತ್ತು ನಾವು ಮಾತನಾಡುವುದಲ್ಲ ಇವರ ಮಂತ್ರಿಗಳೇ ,‌ಶಾಸಕರೇ ಟೀಕಿಸುತ್ತಿದ್ದಾರೆ. ನರೇಂದ್ರ ಮೋದಿಯನ್ನು ಟೀಕೆ ಮಾಡೋದು ಬಿಡಿ ಇವರು ಏನ್ ಮಾಡ್ತಿದ್ದಾರೆ. ಕೊಡಗಿನಲ್ಲಿ ನೆರೆ ಬಂದಾಗ ನಾವು ಕೇಂದ್ರದ ಹಣದಿಂದ ಪರಿಹಾರ ಮಾಡಿಲ್ಲ. ಹತ್ತು ಸಾವಿರ ಮನೆ ಬಾಡಿಗೆ ಕೊಟ್ಟಿದ್ವಿ, ಹತ್ತು ಲಕ್ಷ ಕೊಟ್ಟು ಮನೆ ಕಟ್ಟಿಕೊಟ್ಟಿದ್ದೇವೆ ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದರು.

Key words: former CM-HD Kumaraswamy- outrage-against-CM BS Yeddyurappa-son vijayendra