ಮೈಸೂರು ದಸರಾ ಜಂಬೂ ಸವಾರಿ: ಭರದಿಂದ ಸಾಗುತ್ತಿರುವ ಅಂತಿಮ ಹಂತದ ಸಿದ್ಧತಾ ಕಾರ್ಯ…

ಮೈಸೂರು,ಅ,4,2019(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿ ವೀಕ್ಷಣೆಗೆ ಅಂತಿಮ ಹಂತದ ಸಿದ್ಧತಾ ಕಾರ್ಯ ಭರದಿಂದ ಸಾಗುತ್ತಿದೆ.

ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾದ ಹಿನ್ನೆಲೆ ಸಿದ್ದತೆ ಚುರುಕುಗೊಂಡಿದ್ದು ಜಂಬೂ ಸವಾರಿ ಸಾಗುವ ಮಾರ್ಗದ ಇಕ್ಕೆಲಗಳಲ್ಲಿ ಸಿದ್ದತಾ ಕಾರ್ಯ ನಡೆಯುತ್ತಿದೆ.  ರಸ್ತೆ ಇಕ್ಕೆಲಗಳಲ್ಲಿ ಶಾಮಿಯಾನ ಅಳವಡಿಕೆ ಮಾಡಲಾಗುತ್ತಿದ್ದು, ಬಲರಾಮದ್ವಾರದಿಂದ ಕೆ ಆರ್ ವೃತ್ತ, ಸಯ್ಯಾಜಿರಾವ್ ರಸ್ತೆಗಳಲ್ಲಿ ಪ್ರೆಕ್ಷಕರಿಗೆ ನೆರಳಿನ‌ ವ್ಯವಸ್ಥೆ ಮಾಡಲಾಗಿದೆ. ಪ್ರೇಕ್ಷಕರು ಜಂಬೂಬಸವಾರಿ ಸಾಗುವ ರಸ್ತೆಗೆ ಇಳಿಯದಂತೆ  ಕಬ್ಬಿಣದ ಗ್ಯಾಲರಿ ಅಳವಡಿಕೆ ಮಾಡಲಾಗಿದೆ.

ಇನ್ನೊಂದೆಡೆ ಜಂಬೂ ಸವಾರಿಯಲ್ಲಿ ಪ್ರೇಕ್ಷಕರನ್ನ ಸೆಳೆಯುವ ಸ್ತಬ್ಧಚಿತ್ರಗಳ ತಯಾರಿ ಕಾರ್ಯವೂ ಭರದಿಂದ ಸಾಗಿದೆ. ಮೈಸೂರಿನ ಬಂಡಿಪಾಳ್ಯದ ಆರ್.ಎಂ.ಸಿ. ಮಾರುಕಟ್ಟೆ ಪ್ರದೇಶದಲ್ಲಿ ಟ್ಯಾಬ್ಲೊ ತಯಾರಿ ಕಾರ್ಯ ಸ್ಥಳಕ್ಕೆ ಸಚಿವ ವಿ ಸೋಮಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶೀಘ್ರವಾಗಿ ಸ್ತಬ್ಧಚಿತ್ರ ತಯಾರಿ ಮುಕ್ತಾಯ ಮಾಡುವಂತೆ ವಿ ಸೋಮಣ್ಣ ಸೂಚನೆ ನೀಡಿದರು.

Key words: mysore dasara- jamboo savari- final stage -preparation