ವಿರಾಟ್ ಕೊಹ್ಲಿಗೆ  ದಶಕದ ಏಕದಿನ ಕ್ರಿಕೆಟಿಗ , ಎಂಎಸ್ ಧೋನಿಗೆ ಸ್ಪಿರಿಟ್ ಆಫ್ ದಿ ಕ್ರಿಕೆಟ್ ಪುರಸ್ಕಾರ…

ನವದೆಹಲಿ,ಡಿಸೆಂಬರ್,28,2020(www.justkannada.in):  ಐಸಿಸಿ ದಶಕದ ಪ್ರಶಸ್ತಿ ಪಟ್ಟಿ ಬಿಡುಗಡೆಯಾಗಿದ್ದು, ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ದಶಕದ ಏಕದಿನ ಆಟಗಾರ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಇನ್ನು ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರು ಸ್ಪಿರಿಟ್ ಆಫ್ ದಿ ಕ್ರಿಕೆಟ್ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಈ ಮಧ್ಯೆ ಮಹಿಳಾ ಪ್ರಶಸ್ತಿಯಲ್ಲಿ ಆಸ್ಟ್ರೇಲಿಯಾದ ಎಲಿಸ್ ಪೆರ್ರಿ ಕ್ಲೀನ್ ಸ್ವೀಪ್ ಸಾಧಿಸಿದ್ದಾರೆ. ದಶಕದ ಮಹಿಳಾ ಆಟಗಾರ್ತಿ, ದಶಕದ ಏಕದಿನ ಆಟಗಾರ್ತಿ, ದಶಕದ ಟಿ 20 ಆಟಗಾರ್ತಿ ಎಲ್ಲಾ ಪ್ರಶ್ತಿಗಳು ಪೆರ್ರಿ ಪಾಲಾಗಿದೆ.virat-kohli-wins-spirit-cricket-award-ms-dhoni

ದಶಕದ ಟೆಸ್ಟ್ ಆಟಗಾರ ಪ್ರಶಸ್ತಿಗೆ ಸ್ಟೀವ್ ಸ್ಮಿತ್, ದಶಕದ ಟಿ20 ಆಟಗಾರ ಪ್ರಶಸ್ತಿಗೆ ರಶೀದ್ ಖಾನ್ ಭಾಜನರಾಗಿದ್ದಾರೆ.

Key words: Virat Kohli- wins -Spirit – Cricket award – MS Dhoni