Thursday, October 15, 2026

Dasara Wishes

Strengthening DasraWishes_JK DasraWishes JK
Happy Dasara
Home Crime ಖಾಸಗಿ ಬಸ್ ಹರಿದು ಒಂದುವರೆ ವರ್ಷದ ಮಗು ಸಾವು

ಖಾಸಗಿ ಬಸ್ ಹರಿದು ಒಂದುವರೆ ವರ್ಷದ ಮಗು ಸಾವು

ಮೈಸೂರು,ಸೆಪ್ಟಂಬರ್,29,2026 (www.justkannada.in): ರಸ್ತೆ ಬದಿ ನಿಂತಿದ್ದ ಒಂದುವರೆ ವರ್ಷದ ಮಗುವಿನ ಮೇಲೆ ಖಾಸಗಿ ಬಸ್ ಹರಿದು ಪುಟ್ಟಕಂದಮ್ಮ ಪ್ರಾಣಬಿಟ್ಟಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ನಂಜಾಪುರ ಗ್ರಾಮದಲ್ಲಿ ನಡೆದಿದೆ.

ಬಸವರಾಜು ಮತ್ತು ಕಾಂಚನ ದಂಪತಿಯ ಒಂದೂವರೆ ವರ್ಷದ ಪುತ್ರಿ ಲತೀಕ್ಷಾ ಮೃತಪಟ್ಟ ಬಾಲಕಿ. ಖಾಸಗಿ ವಿದ್ಯಾಸಂಸ್ಥೆಗೆ ಸೇರಿದ ಸ್ಕೂಲ್ ಬಸ್ ಹರಿದು ಈ ಘಟನೆ ಸಂಭವಿಸಿದೆ.child die1

ಬಸವರಾಜು ಮೊದಲ ಪುತ್ರ ತಿಲಕ್ ಶಾಲೆಯಿಂದ ಬಂದಿದ್ದ.  ತಿಲಕ್ ನನ್ನು ಬಸ್ಸಿನಿಂದ ಇಳಿಸಿಕೊಂಡು ಮನೆಗೆ ಕರೆದೊಯ್ಯುವಾಗ ಈ ಘಟನೆ ನಡೆದಿದೆ. ಬಸ್ ರಿವರ್ಸ್ ತೆಗೆಯುವಾಗ ಚಾಲಕನ ನಿರ್ಲಕ್ಷ್ಯದಿಂದ ಮಗುವಿನ ತಲೆ ಮೇಲೆ  ಬಸ್ ಹರಿದಿದೆ.child die

ಇನ್ನು ಘಟನೆಗೆ ಕಾರಣನಾದ ಚಾಲಕ ಸಿದ್ದರಾಜುವನ್ನು  ಬಿಳಿಕೆರೆ ಠಾಣಾ ಪೊಲೀಸರು ಬಂಧಿಸಿದ್ದು, ಈ ಸಂಬಂಧ ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹುಣಸೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಬಾಲಕಿಯ ಪೋಸ್ಟ್ ಮಾರ್ಟಂ ಮಾಡಲಾಗಿದ್ದು ಆಸ್ಪತ್ರೆಯ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.dies jk02_new jk02 new

 

English Summary
Title

Mysuru Tragedy: Toddler Dies After Being Run Over by Private School Bus in Hunsur

Short Description
A heartbreaking accident occurred in Nanjapura village, Hunsur taluk, Mysuru, where a 1-year-and-7-month-old toddler, Latiksha, was run over and killed on the spot by a private school vehicle. The incident took place when the child’s mother went to receive her son from a Shastri Public School bus. As the mother was helping her son alight, the vehicle moved suddenly, crushing the little girl standing nearby. Local police have registered a case of rash and negligent driving against the 42-year-old bus driver, Siddaraju, following a formal complaint by the grieving family demanding strict legal action.
Keywords
child, dies, private bus, Mysore, Hunsur