Friday, September 18, 2026

BDA Apartments

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಗೆ ಸಂಪುಟದ ಪರವಾಗಿ...
Home Front Page ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಗೆ ಸಂಪುಟದ ಪರವಾಗಿ ಸನ್ಮಾನ…!

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಗೆ ಸಂಪುಟದ ಪರವಾಗಿ ಸನ್ಮಾನ…!

ಬೆಂಗಳೂರು,ಡಿಸೆಂಬರ್,28,2020(www.justkannada.in) : ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರು ಇದೇ ತಿಂಗಳ ಕೊನೆಯಲ್ಲಿ ನಿವೃತ್ತರಾಗಲಿದ್ದು, ಅವರನ್ನು ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಡೀ ಸಂಪುಟದ ಪರವಾಗಿ ಸನ್ಮಾನಿಸಿದರು.

 T.M.Vijayabhaskar-Chief,Secretary,State,Government,Vol,Felicitation,behalf

 

ಹಿಂದಿನ ಸಿ.ಎಸ್.ರತ್ನಪ್ರಭಾ ನಿವೃತ್ತಿಯ ನಂತರ 2018ರ ಜೂನ್ ನಲ್ಲಿ ವಿಜಯ ಭಾಸ್ಕರ್ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾಗಿದ್ದರು. 1983ನೇ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿದ್ದಾರೆ.

 T.M.Vijayabhaskar-Chief,Secretary,State,Government,Vol,Felicitation,behalf

ಇವರು ಸಿಎಸ್ ಆಗಿ ಅಧಿಕಾರ ವಹಿಸಿಕೊಂಡ ಬಳಿಕ 64 ಸಚಿವ ಸಂಪುಟ ಸಭೆಗಳನ್ನು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆಸಿದ್ದಾರೆ. ಇಂದಿನ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ವಿಜಯಭಾಸ್ಕರ್ ರನ್ನು ಶ್ಲಾಘಿಸಿದರು. ಇಡೀ ಸರ್ಕಾರದ ಪರವಾಗಿ ಶಾಲು ಹೊದಿಸಿ, ಸ್ಮರಣಿಕೆ ಕೊಟ್ಟು ಸನ್ಮಾನಿಸಲಾಯಿತು.

key words : T.M.Vijayabhaskar-Chief-Secretary-State-Government-Vol-Felicitation-behalf.