ಬೀದರ್, ಆಗಸ್ಟ್,4,2026 (www.justkannada.in): ಸಚಿವ ಸಂಪುಟ ವಿಸ್ತರಣೆಯಾದಾಗ ಅಸಮಮಾಧಾನ ಸಹಜ. ನಮ್ಮ ಪಕ್ಷದ ಹೈಕಮಾಂಡ್ ಎಲ್ಲವನ್ನು ಸರಿಪಡಿಸುತ್ತದೆ ಎಂದು ನಗರಾಭಿವೃದ್ದಿ ಸಚಿವ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಸಚಿವ ಸ್ಥಾನ ಸಿಗದಿದ್ದಕ್ಕೆ ಕೆಲ ಶಾಸಕರು ಅಸಮಾಧಾನ ವ್ಯಕ್ತಪಡಿಸಿರುವ ಕುರಿತು ಮಾತನಾಡಿದ ಸಚಿವ ಯತೀಂದ್ರ ಸಿದ್ದರಾಮಯ್ಯ, ಸಂಫುಟ ವಿಸ್ತರಣೆಯಾದಾಗ ಎಲ್ಲಾ ಪಕ್ಷಗಳಲ್ಲೂ ಅಸಮಾಧಾನ ಸಹಜ. ಸರ್ಕಾರ ರಚನೆಯಾದಾಗ ಹಿರಿಯರು ಕಿರಿಯರನ್ನು ಸೇರಿಸಿ ಸಂಪುಟ ರಚಿಸಬೇಕು. 
ಸಚಿವಸ್ಥಾನ ಸಿಗದವರು ಅಸಮಾಧಾನಗೊಳ್ಳುತ್ತಾರೆ. ಪಕ್ಷದ ಹೈಕಮಾಂಡ್ ಎಲ್ಲವನ್ನೂ ಸರಿ ಮಾಡುತ್ತೆ. ಈ ಬಾರಿ ಮುಸ್ಲೀಂ ಸಮುದಾಯದ ಮೂವರಿಗೆ ಅವಕಾಶ ನೀಡಲಾಗಿದೆ ಎಂದು ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
Key words: Dissatisfaction, cabinet, expanded, Minister, Yathindra Siddaramaiah







