ಶುಲ್ಕ ಸಮಸ್ಯೆ ಪರಿಹಾರಕ್ಕೆ ಸಮಿತಿಗಳ ರಚನೆ:  ಶಿಕ್ಷಣ ಸಚಿವ ಸುರೇಶ್ ಕುಮಾರ್

ಬೆಂಗಳೂರು,ಫೆಬ್ರವರಿ4,2021(www.justkannada.in):   ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ಖಾಸಗಿ ಅನುದಾನರಹಿತ ಶಾಲಾ  ಕಾಲೇಜುಗಳ ಶುಲ್ಕಗಳ ಕುರಿತ ಪೋಷಕರ ತರಕಾರುಗಳ ಪರಿಹಾರಕ್ಕೆ ಅಧಿಕಾರಯುಕ್ತ ಸಮಿತಿಗಳನ್ನು ರಚಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.jk

ಕೋವಿಡ್-19ರ ಹಿನ್ನೆಲೆಯಲ್ಲಿ 2020-21ನೇ ಸಾಲಿನಲ್ಲಿ ಖಾಸಗಿ ಅನುದಾನರಹಿತ ಶಾಲೆಗಳು 2019-20ನೇ ಸಾಲಿನ ಬೋಧನಾ ಶುಲ್ಕದ ಶೇ. 70ರಷ್ಟು ಮೊತ್ತವನ್ನು ಒಟ್ಟಾರೆ ಶುಲ್ಕವನ್ನಾಗಿ ಪಡೆಯಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಜ. 29ರಂದು ಆದೇಶ ಹೊರಡಿಸಿದ್ದು, ಆದೇಶದ ಭಾಗವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತಾಲಯ ಈ ಸಂಬಂಧದ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಯುಕ್ತ ಸಮಿತಿಗಳನ್ನು ರಚಿಸಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ 6 ವಲಯಗಳಲ್ಲಿ ಪ್ರತ್ಯೇಕ ಸಮಿತಿಗಳು, ಮೈಸೂರು ಜಿಲ್ಲೆಯಲ್ಲಿ 2  ಸೇರಿದಂತೆ ರಾಜ್ಯದ ಎಲ್ಲ ಶೈಕ್ಷಣಿಕ ಜಿಲ್ಲೆಗಳಲ್ಲಿ ಒಂದೊಂದು ಸಮಿತಿಯನ್ನು ರಚಿಸಲಾಗಿದೆ. ಇಲಾಖಾ ನಿರ್ದೇಶಕರು, ಸಹ ನಿರ್ದೇಶಕರು, ಡಿಡಿಪಿಐ, ಡಯಟ್ ಪ್ರಾಚಾರ್ಯರು, ಡಯಟ್‍ನ ಹಿರಿಯ ಉಪನ್ಯಾಸಕರನ್ನೊಳಗೊಂಡ ವಿವಿಧ ಜಿಲ್ಲಾ ಸಮಿತಿಗಳನ್ನು ರಚಿಸಲಾಗಿದೆ ಎಂದು  ಸುರೇಶ್  ಕುಮಾರ್ ತಿಳಿಸಿದ್ದಾರೆ.  Formation - Committees -Fee Problem- Solving-  Education Minister- Suresh Kumar

ಪೋಷಕರು ಪ್ರಸ್ತುತ ವರ್ಷದ  ಶುಲ್ಕ ಪಾವತಿಯ ಸಂಬಂಧದ ಸಮಸ್ಯೆಗಳನ್ನು ಈ ಸಮಿತಿಯ ಮುಂದೆ ಪ್ರಸ್ತಾಪಿಸಿ ಪರಿಹರಿಸಕೊಳ್ಳಬಹುದೆಂದು ಸಚಿವರು ತಿಳಿಸಿದ್ದಾರೆ.

ಇಂತಹ ಸಮಸ್ಯೆಗಳ  ಸಂದರ್ಭದಲ್ಲಿ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಸಲ್ಲಿಸುವ ಸಂಬಂಧದಲ್ಲಿ  ಪೋಷಕರು, ಶಾಲೆಗಳು  ಯಾವ ಕ್ರಮಗಳನ್ನು ಅನುಸರಿಸಬೇಕು ಮತ್ತು  ಅರ್ಜಿ ಸ್ವೀಕರಿಸುವ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸಮಿತಿಗಳ  ಕರ್ತವ್ಯಗಳ ಕುರಿತು ಸವಿವರ ಕ್ರಮಗಳನ್ನು ಸುತ್ತೋಲೆಯಲ್ಲಿ ವಿವರಿಸಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

ENGLISH SUMMARY….

We have formed committees to solve school fee problem
Bengaluru, Feb. 4, 2021 (www.justkannada.in): “We have formed authorized committees to address the private unaided school and college fee problems faced by the parents for the current year,” Primary and Secondary Education Minister S. Suresh Kumar has informed.
In a press release, he has informed that the Primary and Secondary Education Department has issued orders directing the Private Unaided schools to collect only 70% of the tuition fees which was collected during 2019-20 as the total fee for this education year i.e., 2020-21, due to the COVID-19 pandemic. The order was issued on Jan. 29, and the Department of Public Instructions has formed authorized committees to address the problems.We have formed committees to solve school fee problem Bengaluru, Feb. 4, 2021 (www.justkannada.in): "We have formed authorized committees to address the private unaided school and college fee problems faced by the parents for the current year," Primary and Secondary Education Minister S. Suresh Kumar has informed. In a press release, he has informed that the Primary and Secondary Education Department has issued orders directing the Private Unaided schools to collect only 70% of the tuition fees which was collected during 2019-20 as the total fee for this education year i.e., 2020-21, due to the COVID-19 pandemic. The order was issued on Jan. 29, and the Department of Public Instructions has formed authorized committees to address the problems. Parents who are facing problems can approach these committees through the respective Block Education Offices the press release read. Keywords: Education Minister/ S. Suresh Kumar/ Committees formed to address private unaided school fee problem/
Parents who are facing problems can approach these committees through the respective Block Education Offices the press release read.
Keywords: Education Minister/ S. Suresh Kumar/ Committees formed to address private unaided school fee problem/

Key words: Formation – Committees -Fee Problem- Solving-  Education Minister- Suresh Kumar