Friday, July 31, 2026

BDA Apartments

Home Cinema ‘ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ’ಯಿಂದ ಸಾಮೂಹಿಕ ವಿವಾಹ ಆಯೋಜನೆ

‘ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ’ಯಿಂದ ಸಾಮೂಹಿಕ ವಿವಾಹ ಆಯೋಜನೆ

ಬೆಂಗಳೂರು, ಡಿಸೆಂಬರ್ 24, 2021 (www.justkannada.in): ‘ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ’ ಐದು ವರ್ಷ ತುಂಬಿದ ಸಂಭ್ರಮಕ್ಕೆಂದು ಸಾಮೂಹಿಕ ವಿವಾಹವನ್ನು ಆಯೋಜಿಸಿದೆ.

ಐದು ಜೋಡಿಗಳಿಗೆ ಸರಳವಾಗಿ ವಿವಾಹ ಮಾಡಲು ‘ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ’ ಯೋಜನೆ ರೂಪಿಸಿದೆ.

ಆರ್ಥಿಕವಾಗಿ ಅಶಕ್ತರು ಸಾಮೂಹಿಕ ವಿವಾಹವಾಗಲು ಅರ್ಜಿ ಸಲ್ಲಿಸಿದರೆ ಫೆಬ್ರವರಿ ತಿಂಗಳಲ್ಲಿ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಸಾಮೂಹಿಕ ವಿವಾಹ ನೆರವೇರಿಸಲಿದೆ.

ಆರ್ಥಿಕವಾಗಿ ಅಶಕ್ತರಾಗಿರುವವರು, ಆರ್ಥಿಕವಾಗಿ ಶಕ್ತರಿದ್ದು ಸರಳ ವಿವಾಹ ಆಗುವ ಆದರ್ಶ ಹೊಂದಿರುವವರು ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿಯನ್ನು ಜನವರಿ 02ರ ಒಳಗೆ ಸಂಪರ್ಕಿಸಿ ಅಗತ್ಯ ದಾಖಲೆ ಸಲ್ಲಿಸಬೇಕಿದೆ.