ಬೆಂಗಳೂರು,ಸೆಪ್ಟಂಬರ್,15,2026 (www.justkannada.in): ಕರಾವಳಿ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡುವ ನಿಟ್ಟಿನಲ್ಲಿ ಸೆಪ್ಟಂಬರ್ 18 ರಂದು ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದ್ದು ಈ ಕುರಿತು ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಎಂಎಲ್ ಸಿ ಸಿಟಿ ರವಿ, ಕ್ಯಾಬಿನೆಟ್ ಸಭೆ ಮಾಡುವುದು ತಪ್ಪು ಅಂತಾ ಹೇಳುವುದಿಲ್ಲ. ಕೇವಲ ರಾಜಕೀಯ ನಾಟಕ ಆಗಬಾರದು. ನಾಟಕ ಆದರೆ ಬಹಳ ದಿನ ಜನರ ಮನಸ್ಸಿನಲ್ಲಿ ಉಳಿಯಲ್ಲ ಎಂದರು.
ಭ್ರಷ್ಟಾಚಾರ ಸಹಿಸಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದರು ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡುವಂತೆ ಹೇಳಿದರು. ಆದರೆ ಸಿಎಂ ಕಚೇರಿಯೇ ಭ್ರಷ್ಡಾಚಾರ ಮಾಡಿದರೇ ಯಾರಿಗೆ ಹೇಳೋದು? ಮುಖ್ಯಮಂತ್ರಿಗಳಿಗೆ ಎಲ್ಲವೂ ಕೂಡ ಗೊತ್ತಿದೆ. ಅವರ ಮುಖಕ್ಕೆ ಹಿಡಿದು ಎಲ್ಲಿ ಹೇಳಬೇಕೋ ಅಲ್ಲಿ ಹೇಳುತ್ತೇವೆ ಎಂದು ಸಿಟಿ ರವಿ ತಿಳಿಸಿದರು.
Key words: cabinet meeting, coastal, region, political drama, MLC C.T. Ravi







