ಬಾಲಿವುಡ್ ನಟಿ ಜೂಹಿ ಚಾವ್ಲಾಗೆ ಮತ್ತೆ ದಿಲ್ಲಿ ಹೈಕೋರ್ಟ್ ಬಿಗ್ ಶಾಕ್

ಬೆಂಗಳೂರು, ಡಿಸೆಂಬರ್ 24, 2021 (www.justkannada.in): ಬಾಲಿವುಡ್ ನಟಿ ಜೂಹಿ ಚಾವ್ಲಾಗೆ ಮತ್ತೆ ಹೈಕೋರ್ಟ್ ಬಿಗ್ ಶಾಕ್ ನೀಡಿದ್ದು, 5 ಜಿ ಪ್ರಕರಣದ ಅರ್ಜಿ ವಿಚಾರಣೆಯನ್ನು ದೆಹಲಿ ಕೋರ್ಟ್ ಮುಂದೂಡಿದೆ.

5ಜಿ ತಂತ್ರಜ್ಞಾನ ಅಳವಡಿಕೆ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ರದ್ದು ಮಾಡಿದ್ದ ದೆಹಲಿ ಕೋರ್ಟ್​ ಏಕಸದಸ್ಯ ಪೀಠದ ಆದೇಶದ ವಿರುದ್ಧ ನಟಿ ಜೂಹಿ ಚಾವ್ಲಾ ಮೇಲ್ಮನವಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆಯನ್ನು ವಿಭಾಗೀಯ ಪೀಠ ಜನವರಿ 25 ಕ್ಕೆ ಮುಂದೂಡಿದೆ. 5 ಜಿ ತಂತ್ರಜ್ಞಾನ ಅಳವಡಿಕೆಯಿಂದ ಮಾನವನ ಮೇಲಾಗುವ ಪರಿಣಾಮಗಳ ಕುರಿತು ನಟಿ ಅರ್ಜಿ ಸಲ್ಲಿಸಿದ್ದರು.

ಇದು ಕೇವಲ ಪ್ರಚಾರಕ್ಕಾಗಿ ಹಾಕಿದ ಅರ್ಜಿಯಾಗಿದೆ ಎಂದು ಅರ್ಜಿ ತಿರಸ್ಕರಿಸಿ, 20 ಲಕ್ಷ ದಂಡವನ್ನು ಏಕಸದಸ್ಯ ಪೀಠ ವಿಧಿಸಿದೆ. ಕೋರ್ಟ್​ಗೆ ದಂಡದ ಶುಲ್ಕವನ್ನು ಪಾವತಿಸಲು ಸೂಚಿಸಿದೆ ಎಂದು ಕೋರ್ಟ್​ಗೆ ತಿಳಿಸಿದ್ದಾರೆ.