ತಲಕಾವೇರಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭೇಟಿ ವಿಶೇಷ ಪೂಜೆ ಸಲ್ಲಿಕೆ.

ಕೊಡಗು,ಡಿಸೆಂಬರ್,24,2021(www.justkannada.in): ಮೇಕೆದಾಟು ಯೋಜೆನೆ ಯಶಸ್ವಿಗಾಗಿ  ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಲಕಾವೇರಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ತಲಕಾವೇರಿಗೆ ಭೇಟಿ ನೀಡಿದ  ಡಿಕೆ ಶಿವಕುಮಾರ್ ಭೇಟಿ ಪೂಜೆ ಸಲ್ಲಿಸಿದರು. ಬ್ರಹ್ಮ ಕುಂಡಿಕೆಯಿಂದ ದೂರದಲ್ಲಿ ನಿಂತು ದರ್ಶನ ಪಡೆದರು. ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್, ಜನವರಿ 9ರಿಂದ 19ರವರೆಗೆ ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡುತ್ತೇವೆ. ಮೇಕೆದಾಟು ಯೋಜನೆ ಯಶಸ್ವಿಗಾಗಿ ವಿಶೇಷ ಪೂಜೆ ಸಲ್ಲಿಸಿದ್ದೇನೆ.  ರಾಜ್ಯದ ಹಿತಕ್ಕಾಗಿ ನಮ್ಮ ಹೋರಾಟ ನಡೆಯಲಿದೆ.  ಕಾವೇರಿ ನಮ್ಮದು ನೀರು ನಮ್ಮದು ಯೋಜನೆಯಿಂದ ಎರಡು ರಾಜ್ಯಕ್ಕೂ ಅನುಕೂಲವಾಗಲಿದೆ.siddaramaiah-bs-yeddyurappa-speedy-cure-kpcc-president-dk-sivakumar

ಅದರಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತೆ. ಬೆಂಗಳೂರಿಗೆ ನೀರು ಪೂರೈಕೆ ಮಾಡಬಹುದು. ಕೇಂದ್ರ ಸರ್ಕಾರ ಪರಿಸರ ಕ್ಲಿಯರೆನ್ಸ್ ನೀಡಬೇಕು. ರಾಜ್ಯ ಸರ್ಕಾರ ಒತ್ತಡ ಹಾಕಬೇಕು. ಮೇಕೆದಾಟು ಅಣೆಕಟ್ಟು ನಿರ್ಮಾಣ ಆಗಲೇಬೇಕು.  ಜೆಡಿಎಸ್ ಬಿಜೆಪಿಯವರು ಸಹ ಪಾದಯಾತ್ರೆಗೆ ಬೆಂಬಲಿಸುವುದಾಗಿ ಹೇಳಿದ್ದಾರೆ.

Key words: KPCC President -DK Sivakumar -visits -Talakaveri