ಡ್ರಗ್ಸ್ ಮಾಫಿಯಾ : ನಟಿಯರ ತೇಜೋವಧೆ ಸರಿಯಲ್ಲ ಎಂದ ಕಾಂಗ್ರೆಸ್ ಶಾಸಕ

ಬೆಂಗಳೂರು,ಅಕ್ಟೊಂಬರ್,03,2020(www.justkannada.in)  : ಸಿನಿಮಾ ನಟಿಯರ ತೇಜೋವಧೆ ಸರಿಯಲ್ಲ. ಅವರು ಅನೇಕ ಒಳ್ಳೆಯ ಸಿನಿಮಾ ಕೊಟ್ಟಿರುತ್ತಾರೆ. ಅವರ ತಪ್ಪಿಗೆ ಗೌಪ್ಯವಾಗಿ ಶಿಕ್ಷೆಕೊಡಬೇಕು ಬಹಿರಂಗಪಡಿಸಬಾರದು ಎಂದು ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಾಪೂರ್ ಹೇಳಿದರು.jk-logo-justkannada-logoಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಡ್ರಗ್ಸ್ ಪ್ರತಿಯೊಬ್ಬರಿಗೂ ಅವಶ್ಯಕತೆಯಿದೆ. ರಾಜಮಹಾರಾಜರ ಕಾಲದಿಂದಲೂ ಡ್ರಗ್ಸ್ ಇದೆ. ಆದರೆ, ಇಂದು ಅದರಲ್ಲಿ ವೆರೈಟಿಯಾಗಿದೆ. ಅದನ್ನು ಗೌರವಯುತವಾಗಿ ತಡೆಯಬೇಕಿದೆ ಎಂದು ಸಲಹೆ ನೀಡಿದ್ದಾರೆ.Drugs Mafia-Congressional-lawmaker-says-actresses'-behavior-not-rightನನಗೂ ಮಾನಸಿಕ ನೋವಾಗಿದೆ. ರಾಜಕಾರಣಿಗಳು ಇದಕ್ಕೆ ಹೊರತಾಗಿಲ್ಲ. ಮಹಾತ್ಮ ಗಾಂಧಿಯಂತೆ ಕೆಲವರು ಇರಬಹುದು. ಸಿನಿಮಾ ನಟಿಯರ ತೇಜೋವಧೆ ಸರಿಯಲ್ಲ. ಕೆಲವು ಒಳ್ಳೆಯ ಸಿನಿಮಾಗಳ ಮಾಡಿದ್ದಾರೆ. ಹೀಗಾಗಿ, ಡ್ರಗ್ಸ್ ಮಾಫಿಯಾ ತಡೆಗಟ್ಟುವುದನ್ನು ಗೌರವ ಪೂರ್ವಕವಾಗಿ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

key words : Drugs Mafia-Congressional-lawmaker-says-actresses’-behavior-not-right