ಬಾಕಿ ಹಣ ಬಿಡುಗಡೆಗೆ ಒತ್ತಾಯಿಸಿ ಪತ್ರ: ಆದರೆ ಸರ್ಕಾರ ಉತ್ತರ ನೀಡಿಲ್ಲ- ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ.

ಬೆಂಗಳೂರು,ಆಗಸ್ಟ್,11,2023(www.justkannada.in):  ಬಾಕಿ ಹಣ ಬಿಡುಗಡೆಗೆ ಒತ್ತಾಯಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ.  ಆದರೆ ಸರ್ಕಾರ ಯಾವುದೇ ಉತ್ತರ ನೀಡಿಲ್ಲ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೆಂಪಣ್ಣ, ನಾವು ಯಾವ ಪಕ್ಷವೂ ಅಲ್ಲ. ನಮ್ಮದು ಗುತ್ತಿಗೆದಾರರ ಪಾರ್ಟಿ. ಈ ಹಿಂದೆ ಸಿದ್ಧರಾಮಯ್ಯ ವಿಪಕ್ಷ ನಾಯಕರಾಗಿದ್ದಕ್ಕೆ ಭೇಟಿ ಮಾಡಿದ್ದವು. ಈಗ ಬಾಕಿ ಹಣ ಬಿಡುಗಡೆಗೆ ಆಗ್ರಹಿಸಿ ನಾವು ಸುದ್ದಗೋಷ್ಠಿ ಕರೆದಿದ್ದೇವೆ. ನಮ್ಮ ಕೆಲಸ ನೋಡಿ ಹಣ ಬಿಡುಗಡೆಗೆ ಒತ್ತಾಯ ಮಾಡಿದ್ದೇವೆ ಎಂದರು.

Key words: Letter- demanding- release – money-government – Kempanna