ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರಿಗೆ ಮಾತೃ ವಿಯೋಗ…

ಬಳ್ಳಾರಿ,ಆ,21,2020(www.justkannada.in): ಆರೋಗ್ಯ ಅಚಿವ ಬಿ.ಶ್ರೀರಾಮುಲು ಅವರ ತಾಯಿ ವನ್ನೂರಮ್ಮ (86) ಇಂದು ಬೆಳಗಿನ‌ ಜಾವ 2 ಗಂಟೆಗೆ ನಿಧನರಾಗಿದ್ದಾರೆ. jk-logo-justkannada-logo

ಬಿ.ಶ್ರೀರಾಮುಲು ಅವರ ತಾಯಿ ವನ್ನೂರಮ್ಮ ಅವರಿಗೆ  ಕೋವಿಡ ದೃಡಪಟ್ಟಿತ್ತು. ಬೆಂಗಳೂರಿನ ಬೋರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮೊನ್ನೆ ಬಳ್ಳಾರಿಗೆ ಬಂದಿದ್ದರು. ನಿನ್ನೆ ರಾತ್ರಿ ಮತ್ತು ಮತ್ತೆ ಆರೋಗ್ಯದಲ್ಲಿ ಏರುಪೇರು ಆಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬೆಳಗಿನ ಜಾವ 2ಕ್ಕೆ ವನ್ನೂರಮ್ಮ ಕೊನೆಯುಸಿರೆಳೆದಿದ್ದಾರೆ. ಬೆಳಿಗ್ಗೆ 7 ಗಂಟೆಗೆ ಬಳ್ಳಾರಿ ಸಾರ್ವಜನಿಕ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ಸಚಿವ ಸುಧಾಕರ್ ಸಂತಾಪ

ಸಚಿವ ಶ್ರೀರಾಮುಲು ಅವರ ತಾಯಿ ನಿಧನಕ್ಕೆ ಸಚಿವ ಡಾ.ಕೆ ಸುಧಾಕರ್ ಸಂತಾಪ ಸೂಚಿಸಿದ್ದಾರೆ. ಸಂಪುಟ ಸಹದ್ಯೋಗಿಗಳಾದ ಶ್ರೀರಾಮುಲು ಅವರಿಗೆ ಮಾತೃವಿಯೋಗವಾಗಿರುವ ವಿಷಯ ತಿಳಿದು ಬಹಳ ನೋವುಂಟಾಗಿದೆ. ದೇವರು ಆ ಮಹಾತಾಯಿಯ ಆತ್ಮಕ್ಕೆ ಚಿರಶಾಂತಿ ದೊರಕಿಸಲಿ. ಮತ್ತು ಶ್ರೀರಾಮುಲು ಅವರ ಕುಟುಂಬಕ್ಕೆ ಈ ಅಗಲಿಕೆಯನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಟ್ವಿಟ್ಟರ್ ನಲ್ಲಿ ಸಚಿವ ಸುಧಾಕರ್ ಸಂತಾಪ ಸೂಚಿಸಿದ್ದಾರೆ.

Key words: Health Minister -b. Sriramulu – Mother -death