ಶ್ರೀವೈದ್ಯನಾಥನ ದರ್ಶನ ಹಾಗೂ ಪಂಚಲಿಂಗ ದರ್ಶನದಿಂದ ನನ್ನ ಆರೋಗ್ಯದಲ್ಲಿ ಚೇತರಿಕೆ- ಐಎಎಸ್ ಅಧಿಕಾರಿ ಬಿ.ಶರತ್

ಮೈಸೂರು,ಡಿಸೆಂಬರ್,25,2020(www.justkannada.in): ಐ.ಎ.ಎಸ್. ಅಧಿಕಾರಿ ಶರತ್ ಬಿ. ಅವರು ತಲಕಾಡು ಶ್ರೀ ವೈದ್ಯನಾಥೇಶ್ವರ ದರ್ಶನ ಪಡೆದ ನಂತರ ಆರೋಗ್ಯದಲ್ಲಿ ಚೇತರಿಕೆ  ಕಂಡು ಬಂದಿದೆ ಎಂದು ತಿಳಿಸಿದ್ದಾರೆ. My health -recovery -darshana  -shri panchalinga darshana- IAS officer -B. Sharath-mysore

ತಲಕಾಡು ಪಂಚಲಿಂಗ ದರ್ಶನದ ಪ್ರಯುಕ್ತ ಶ್ರೀ ವೈದ್ಯನಾಥೇಶ್ವರ ದೇವಸ್ಥಾನದಲ್ಲಿ ನಡೆದ ಪಲ್ಲಕ್ಕಿ ಉತ್ಸವದಲ್ಲಿ ಅವರು ಭಾಗವಹಿಸಿದ್ದರು. ಈ ಸಂಬಂಧದ ಸುದ್ದಿಯನ್ನು ‘ಜಸ್ಟ್ ಕನ್ನಡ ಡಾಟ್ ಇನ್’ ನಿನ್ನೆ ವರದಿ ಮಾಡಿತ್ತು. ಈ ವರದಿಗೆ ಪ್ರತಿಕ್ರಿಯೆ ನೀಡಿರುವ ಬಿ.ಶರತ್ ಈ ರೀತಿ ಹೇಳಿಕೆ ನೀಡಿದ್ದಾರೆ.

ಐ.ಸಿ.ಯು.ನಲ್ಲಿದ್ದ ರೋಗಿಯು ಸಹ ಶ್ರೀವೈದ್ಯನಾಥೇಶ್ವರನ ದರ್ಶನ ಪಡೆದರೆ ಗುಣಮುಖರಾಗುತ್ತಾರೆಂಬ ಪ್ರತೀತಿ ಇರುವುದನ್ನು ಕೇಳಲ್ಪಟ್ಟಿದ್ದೆ. ಅದರಂತೆ ನಾನು ಸಹ ಸ್ವಾಮಿಯ ದರ್ಶನ ಪಡೆದಿದ್ದು ಈಗ ಚೇತರಿಸಿಕೊಂಡಿರುತ್ತೇನೆ. ನನಗೆ ಸ್ವಾಮಿಯ ಆಶೀರ್ವಾದದಿಂದ ಚೈತನ್ಯ ಬಂದಿದೆ ಎಂದು ಶರತ್ ಬಿ. ಅವರು ಹೇಳಿದ್ದಾರೆ. My health -recovery -darshana  -shri panchalinga darshana- IAS officer -B. Sharath-mysore

ಪಂಚಲಿಂಗ ದರ್ಶನದಲ್ಲಿ ಭಾಗವಹಿಸಿದ್ದರಿಂದ ಮನಸ್ಸಿಗೆ ಶಾಂತಿ-ಸಮಾಧಾನ ಉಂಟಾಗಿದೆ. ಭಗವಂತನ ಅನುಗ್ರಹದಿಂದ ಶಕ್ತಿ ಬಂದಂತಹ ಅನುಭವ ಆಗಿದೆ.  ಜಾಗತಿಕವಾಗಿ ಆತಂಕ ಮೂಡಿಸಿರುವ ಕೋರೋನಾ ಸೋಂಕು ಬಹುಬೇಗ ನಿಯಂತ್ರಣಕ್ಕೆ ಬಂದು, ಜನರ ಆತಂಕ ಬೇಗ ನಿವಾರಣೆಯಾಗಲಿ, ದೇವರಕೃಪೆಯಿಂದ  ನಾಡಿನ ಜನತೆಗೆ ಒಳಿತಾಗಲಿ ಎಂದು ಈ ಸಂದರ್ಭದಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ಶರತ್ ಬಿ. ಅವರು ತಿಳಿಸಿದ್ದಾರೆ.

English summary….

My health has improved after I had darshan of Sri Vaidyanatheshwara and Panchalinga- IAS officer B. Sharath
Mysuru, Dec. 25, 2020 (www.justkannada.in): Sharath B., IAS said that his health improved after he had darshan of Panchalinga and Vaidyanatheshwara recently.
He had participated in the Pallakki Utsav held at the Sri Vaidyanatheshwara Temple during the Talakadu Panchalinga Darshan, which was reported in Justkannada.in. B. Sharath has given his response to this.My health -recovery -darshana  -shri panchalinga darshana- IAS officer -B. Sharath-mysore
“I had heard that even a patient who is in ICU will get cured if he gets the darshan of Sri Vaidyanatheshwara. I also had darshan of the deity and my health has also improved after that,” he has commented. He also has wished the Corona pandemic would soon come under control by the blessings of God.
Keywords: B. Sharath/ IAS/ Panchalinga Darshan/ Vaidyanatheshwara temple

Key words: My health -recovery -darshana  -shri panchalinga darshana- IAS officer -B. Sharath-mysore