ಖಾಸಿಂ ಸುಲೇಮಾನಿ ಹತ್ಯೆ ಕುರಿತ ಸರಣಿ ಟ್ವೀಟ್ ಮಾಡಿದ ಡೊನಾಲ್ಡ್‌ ಟ್ರಂಪ್

ವಾಷಿಂಗ್ಟನ್, ಜನವರಿ 04, 2019 (www.justkannada.in): ಖಾಸಿಂ ಸುಲೇಮಾನಿ ಹತ್ಯೆ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಸರಣಿ ಟ್ವೀಟ್ ಮಾಡಿದ್ದಾರೆ.

ಇರಾಕ್‌ ರಾಜಧಾನಿ ಬಾಗ್ದಾದ್ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ನಸುಕಿನಲ್ಲಿ ಅಮೆರಿಕ ವಾಯುದಾಳಿ ನಡೆಸಿದ ಇರಾನ್‌ನ ಪ್ರಭಾವಿ ಸೇನಾಧಿಕಾರಿ ಮೇಜರ್ ಜನರಲ್ ಖಾಸಿಂ ಸುಲೇಮಾನಿ ಅವರನ್ನು ಕೊಂದುಹಾಕಿತ್ತು. ಈ ಹತ್ಯೆಯ ಕಾರಣಗಳು ಇದಾಗಿರಬಹುದು ಎನ್ನುವ ಮಾರ್ಮಿಕ ಸಂದೇಶಗಳನ್ನು ಟ್ರಂಪ್ ಅವರ ಟ್ವೀಟ್‌ಗಳು ನೀಡಿವೆ.

ಖಾಸಿಂ ಸುಲೇಮಾನಿಯನ್ನು ಇಷ್ಟು ದಿನ ಬದುಕಲು ಬಿಡಬಾರದಿತ್ತು. ಬಹಳ ಹಿಂದೆಯೇ ಕೊಲ್ಲಬೇಕಿತ್ತು. ಯುದ್ಧಕ್ಕಾಗಿ ಬಂಡವಾಳ ಹೂಡಿದ್ದು ಅಮೆರಿಕ, ಲಾಭವಾಗಿದ್ದು ಮಾತ್ರ ಇರಾನ್‌ಗೆ’ ಎನ್ನುವ ಹತಾಶ ಮನಸ್ಥಿತಿಯ ಭಾವವೂ ಸಾಲುಗಳ ನಡುವೆ ಓದಿಕೊಂಡಾಗ ಗೋಚರವಾಗುತ್ತದೆ. ‘ಇರಾಕ್ ಸೇರಿದಂತೆ ಮಧ್ಯಪ್ರಾಚ್ಯದಲ್ಲಿ ಇರಾನ್ ಪ್ರಭಾವ ತಗ್ಗಿಸುವವರೆಗೆ ಅಮೆರಿಕ ವಿರಮಿಸುವುದಿಲ್ಲ’ ಎನ್ನುವ ಸ್ಪಷ್ಟ ಸಂದೇಶವನ್ನೂ ಟ್ರಂಪ್‌ ತಮ್ಮ ಟ್ವೀಟ್‌ಗಳ ಮೂಲಕ ಜಗತ್ತಿಗೆ ನೀಡಿದ್ದಾರೆ.