‘ಮಾಸ್ಟರ್‌ ಪೀಸ್‌’ ಡೈರೆಕ್ಟರ್ ‘ಶ್ರೀ ಭರತ ಬಾಹುಬಲಿ’ ನೋಡಿ ಒಂದು ಕೋಟಿ ಬಹುಮಾನ ಗೆಲ್ಲಿ !

ಮೈಸೂರು, ಜನವರಿ 04, 2019 (www.justkannada.in): ಮಾಸ್ಟರ್‌ ಪೀಸ್‌ ಚಿತ್ರದ ನಿರ್ದೇಶಕ ಮಂಜು ಮಾಂಡವ್ಯ  ಹೀರೋ ಆಗಿ ನಟಿಸಿರುವ ‘ಶ್ರೀ ಭರತ ಬಾಹುಬಲಿ’ ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ.

ಚಿತ್ರತಂಡದಿಂದ ಪ್ರೇಕ್ಷಕರಿಗೆ ಒಂದು ಬಂಪರ್‌ ಆಫರ್‌ ಸಿಕ್ಕಿದೆ. ಈ ಸಿನಿಮಾ ನೋಡಿದವರಿಗೆ 1 ಕೋಟಿ ರೂ. ಬಹುಮಾನ ಸಿಗಲಿದೆಯಂತೆ.

ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಗಟ್ಟಿಯಾಗಿ ನಿಲ್ಲುವಂತೆ ಮಾಡಲು ನಿರ್ಮಾಪಕರು ಡಿಫರೆಂಟ್‌ ಪ್ರಚಾರತಂತ್ರ ರೂಪಿಸಿದ್ದಾರೆ. ಮೊದಲ ಎರಡು ವಾರದೊಳಗೆ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವ ಪ್ರೇಕ್ಷಕರು ಚಿತ್ರತಂಡ ನೀಡುವ ಪ್ರತ್ಯೇಕ ಟಿಕೆಟ್‌ ಅನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು.

ಎರಡು ವಾರದ ನಂತರ ಅವುಗಳನ್ನು ಲಕ್ಕಿ ಡಿಪ್‌ ಮೂಲಕ ಆಯ್ಕೆ ಮಾಡಿ ಅದೃಷ್ಟಶಾಲಿ ಪ್ರೇಕ್ಷಕರಿಗೆ ಒಂದು ಕೋಟಿ ರೂ. ಬಹುಮಾನ ನೀಡಲು ನಿರ್ಧರಿಸಲಾಗಿದೆ.