ಯೋಗಯುಕ್ತ, ರೋಗಮುಕ್ತ: ಬೆಂಗಳೂರಿನಲ್ಲಿ ಯೋಗ ಜಾಗೃತಿ ನಡಿಗೆ….

ಬೆಂಗಳೂರು,ಜೂ,20,2020(www.justkannada.in): ಶ್ರೀ ಯೋಗ ಮತ್ತು ಸಾಂಸ್ಕೃತಿಕ ಅಕಾಡೆಮಿ ಮತ್ತು ಆಚಾರ್ಯ ಯೋಗ ಯೂತ್ ಕ್ಲಬ್ ಜಂಟಿಯಾಗಿ ಕರೋನಾ ಮತ್ತು ಯೋಗ ಜಾಗೃತಿ ನಡಿಗೆ ಆಯೋಜಿಸಿತ್ತು.

ಯೋಗ ಜಾಗೃತಿ ನಡಿಗೆಯಲ್ಲಿ ಸುಮಾರು 60 ಜನ ವಿದ್ಯಾರ್ಥಿಗಳು ಪಾಲ್ಗೊಂಡು ಹೆಜ್ಜೆ ಹಾಕಿದರು. ಕಾರ್ಯಕ್ರಮ ಪ್ರಾರಂಭವಾಗುವ ಮೊದಲು ಚೀನಾ ಗಡಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.  ಬಳಿಕ ಪಾಲ್ಗೊಂಡಿದ್ದ ಎಲ್ಲ ವಿದ್ಯಾರ್ಥಿಗಳಿಗೆ  ಟೆಂಪರೇಚರ್ ಚೆಕ್ ಮಾಡಿ, ನಂತರ ಸ್ಯಾನಿಟೈಸರ್ , ಗ್ಲೌಸ್ ಹಾಗೂ ಮಾಸ್ಕ್ ಅನ್ನು ವಿತರಿಸಿಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡರಾದ ಎಂ ರಾಜ್ ಕುಮಾರ್ ಯೋಗ ಮಾಡಿ ರೋಗ ಮುಕ್ತರಾಗಿ ಎಂಬ ಸಂದೇಶ ನೀಡಿದರು. ಹಾಗೆಯೇ ಶ್ರೀ ರಾಜರಾಜೇಶ್ವರಿ ವಿದ್ಯಾ ಶಾಲೆಯ ಅಧ್ಯಕ್ಷರಾದ  ಗೋಪಾಲನ್ ಮಾತನಾಡಿ ಕರೋನಾ ಇರುವ ಸಂದರ್ಭದಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯೋಗ ಬಗ್ಗೆ ಜನರಿಗೆ ಅರಿವು  ಮೂಡಿಸುವುದು ತುಂಬಾ ಮುಖ್ಯವಾಗಿದೆ  ಎಂದರು.

Yoga -Awareness- Walk -Mysore.ಈ ಜಾಗೃತಿ ನಡಿಗೆಯನ್ನು ತುಂಬ ವ್ಯವಸ್ಥಿತವಾಗಿ ಹಾಗೂ ಎಲ್ಲಾ ತರಹದ ಮುಂಜಾಗರೂಕತೆಯನ್ನು ತೆಗೆದುಕೊಂಡು ನಡೆಸಿರುವುದು ತುಂಬಾ ಸಂತಸ ತಂದಿದೆ ಎಂದು ಗಾರ್ಡನ್ ಸಿಟಿ ಕೋಪರೇಟಿವ್ ಸೊಸೈಟಿಯ ಚೇರ್ಮೆನ್ ಆದ ಮೋಹನ್ .ಕೆ ಅವರು  ನುಡಿದರು.

ಹಲವಾರು ಹೇಳ್ಬಿಡಿ ಬಿಜೆಪಿ ಮುಖಂಡರುಗಳಾದ ಶಶಿಕಾಂತ್ರಾವ್ ಜಗದೀಶ್, ಆರ್ ಚಂದ್ರ, ರಾಜರಾಜೇಶ್ವರಿ ಅಸೋಸಿಯೇಷನ್ ನ ಯೂತ್ ಅಧ್ಯಕ್ಷರಾದ ವೀರು ರಜಪೂತ, ಶ್ರೀ ಯೋಗ ಮತ್ತು  ಸಾಂಸ್ಕೃತಿಕ  ಅಕಾಡೆಮಿಯ ಅಧ್ಯಕ್ಷ ಕಾರ್ಯದರ್ಶಿಗಳಾದ ರಮೇಶ್  ಹಾಗೂ ಆಚಾರ್ಯ ಯೋಗ ಯೂತ್ ಕ್ಲಬ್ ನ ಅಧ್ಯಕ್ಷರಾದ  ಕೆ.ಎಸ್ ಮೋಹನ್ ಕುಮಾರ್ ಹಾಗೂ  ಕಾರ್ಯದರ್ಶಿಯವರಾದ ರಾಜೇಶಾಚಾರಿ ಬಿಬಿಎಂಪಿ ಸದಸ್ಯರಾದ ನಳಿನಿ ಎಂ ಮಂಜು ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Key words: Yoga -Awareness- Walk -Mysore.