Sunday, August 23, 2026

BDA Apartments

Home Front Page ನನ್ನದು ಕೊನೆಯ ಅಧಿವೇಶನ: ಸದನದಲ್ಲಿ ಬಿಎಸ್ ವೈ ಭಾವುಕ: ಮತ್ತೆ ಸ್ಪರ್ಧಿಸಿ ಗೆಲ್ಲಬೇಕು ಎಂದು ಪಕ್ಷಾತೀತವಾಗಿ...

ನನ್ನದು ಕೊನೆಯ ಅಧಿವೇಶನ: ಸದನದಲ್ಲಿ ಬಿಎಸ್ ವೈ ಭಾವುಕ: ಮತ್ತೆ ಸ್ಪರ್ಧಿಸಿ ಗೆಲ್ಲಬೇಕು ಎಂದು ಪಕ್ಷಾತೀತವಾಗಿ ಮನವಿ. 

ಬೆಂಗಳೂರು,ಫೆಬ್ರವರಿ,22,2023(www.justkannada.in):  ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು ಈ ನಡುವೆ ಈ ಸರ್ಕಾರದ ಕೊನೆಯ ಅಧಿವೇಶನ ನಡೆಯುತ್ತಿದೆ. ಈ ಮಧ್ಯೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೂ ಇದು ಕೊನೆಯ ಅಧಿವೇಶನವಾಗಿದ್ದು ಈ ಹಿನ್ನೆಲೆಯಲ್ಲಿ ಸದನದಲ್ಲಿ ಭಾವುಕರಾಗಿ ಮಾತನಾಡಿದ್ದಾರೆ.

ವಿಧಾನಸಭೆಯಲ್ಲಿ  ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ನನ್ನದು ಕೊನೆಯ ಅಧಿವೇಶನ. ನಾನು ಮತ್ತೆ ಸದನದೊಳಗೆ ಬರುವುದಿಲ್ಲ.  ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ನಾನು ಚುನಾವಣೆಯಲ್ಲಿ ನಿಲ್ಲಲ್ಲ ಅಂತಾ ಹೇಳಿದ್ದೇನೆ. ಮತ್ತೆ ನಾನು ಸದನದ ಒಳಗೆ ಬರುವ ಪ್ರಶ್ನಯೆ ಇಲ್ಲ. ನನಗೆ ಅವಕಾಶ ನೀಡಿದ ಪ್ರಧಾನಿ ಮೋದಿಗೆ ಅಭಿನಂದನೆ. ನಾನು ಮೋದಿಗೆ ಚಿರಋಣಿಯಾಗಿರುತ್ತೇನೆ. ಇದು ಒಂದು ರೀತಿಯ ವಿದಾಯದ ಭಾಷಣ ಎಂದು ಭಾವುಕರಾದರು.

ಈ ವೇಳೆ ಬಿಎಸ್ ವೈ ಮತ್ತೆ ಶಾಸಕರಾಗಿ ಸದನಕ್ಕೆ ಬರಬೇಕು. ನಿಮ್ಮ ಅನುಭವ, ಸಲಹೆ ಸದನಕ್ಕೆ ಅವಶ್ಯಕ ಮತ್ತೆ ನೀವು ಚುನಾವಣೆಯಲ್ಲಿ ಸ್ಪರ್ಧಿಸಿ ಸದನಕ್ಕೆ ಬನ್ನಿ ಎಂದು ಪಕ್ಷಾತೀತವಾಗಿ ಶಾಸಕರು ಬಿಎಸ್ ವೈಗೆ ಮನವಿ ಮಾಡಿದರು.

Key words: last session:-BS Yeddyurappa- emotional