Thursday, August 13, 2026

BDA Apartments

Home Cinema ವರ್ಷದವರೆಗೆ ಜಾಮೀನು ಕೋರಲು ನಿರ್ಬಂಧ;  ಆದೇಶ ಮಾರ್ಪಾಡು ಕೋರಿದ್ದ ನಟ ದರ್ಶನ್ ಅರ್ಜಿ ತಿರಸ್ಕಾರ

ವರ್ಷದವರೆಗೆ ಜಾಮೀನು ಕೋರಲು ನಿರ್ಬಂಧ;  ಆದೇಶ ಮಾರ್ಪಾಡು ಕೋರಿದ್ದ ನಟ ದರ್ಶನ್ ಅರ್ಜಿ ತಿರಸ್ಕಾರ

ನವದೆಹಲಿ,ಜುಲೈ,3,2026 (www.justkannada.in): 1 ವರ್ಷದವರೆಗೆ ಜಾಮೀನು ಕೋರಲು ನಿರ್ಬಂಧ ವಿಧಿಸಿರುವ  ಆದೇಶವನ್ನು ಮಾರ್ಪಾಡು ಮಾಡುವಂತೆ ಕೋರಿದ್ದ ನಟ ದರ್ಶನ್ ಅರ್ಜಿ ತಿರಸ್ಕಾರಯನ್ನು ಸುಪ್ರೀಂಕೋರ್ಟ್ ರಿಜಿಸ್ಟ್ರಾರ್ ತಿರಸ್ಕರಿಸಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್  ಪರಪ್ಪನ ಅಗ್ರಹಾರ ಜೈಲಿನಲ್ಲಿ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ದರ್ಶನ್ ​​ಗೆ ಈ ಹಿಂದೆ ವೈದ್ಯಕೀಯ ಆಧಾರದಲ್ಲಿ ಜಾಮೀನು ದೊರಕಿತ್ತು, ಕೆಲ ತಿಂಗಳುಗಳ ಕಾಲ ಜೈಲಿನಿಂದ ಹೊರಗಿದ್ದರು, ಆದರೆ ನಂತರ ಸುಪ್ರೀಂಕೋರ್ಟ್, ಜಾಮೀನು ರದ್ದು  ಮಾಡಿದ್ದು ಜೊತೆಗೆ ಇನ್ನೊಂದು ವರ್ಷ ಜಾಮೀನಿಗೆ ಅರ್ಜಿ ಸಲ್ಲಿಸದಂತೆ ನಿರ್ಬಂಧ ವಿಧಿಸಿದೆ. ಕಳೆದ ಬಾರಿ ದರ್ಶನ್ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ‘ದರ್ಶನ್ ಪ್ರಕರಣದಲ್ಲಿ ಒಂದು ವರ್ಷದ ಒಳಗಾಗಿ ಸುಮಾರು 60 ಸಾಕ್ಷಿಗಳ ವಿಚಾರಣೆ ಮಾಡದಿದ್ದರೆ ಆಗ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಸಬಹುದು ಎಂದು ಸುಪ್ರೀಂಕೋರ್ಟ್, ಹೇಳಿತ್ತು. ಆ ಮೂಲಕ ಮುಂದಿನ ಒಂದು ವರ್ಷದ ವರೆಗೆ ದರ್ಶನ್​​ಗೆ ಜಾಮೀನು ಸಲ್ಲಿಸಲು ಅವಕಾಶವನ್ನು ನಿರಾಕರಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಈ ಆದೇಶವನ್ನು ಮಾರ್ಪಾಡು ಮಾಡುವಂತೆ ಆರೋಪಿ ನಟ ದರ್ಶನ್ ಪರ ವಕೀಲರು ಸುಪ್ರೀಂಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು, ಆದರೆ ಇದು ವಿಚಾರಣೆಗೆ ಅರ್ಹವಲ್ಲದ ಅರ್ಜಿ ಎಂದು ಸುಪ್ರೀಂಕೋರ್ಟ್ ರಿಜಿಸ್ಟ್ರಾರ್ ತಿರಸ್ಕರಿಸಿದ್ದಾರೆ.

ತುರ್ತು ಪರಿಸ್ಥಿತಿಗಳಲ್ಲಿ ಜಾಮೀನು ಕೋರಲು ಅನುವು ಮಾಡಿಕೊಡುವಂತೆ ಕೋರಿ ನಟ ದರ್ಶನ್ ಸುಪ್ರೀಂಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು. ಅಲ್ಲದೆ ತಮ್ಮ ಜಾಮೀನಿನ ಕುರಿತಾಗಿ ಸುಪ್ರೀಂಕೋರ್ಟ್ ನೀಡಿರುವ ಆದೇಶಕ್ಕೆ ತಿದ್ದುಪಡಿಗೆ ಸಹ ದರ್ಶನ್ ಆಗ್ರಹಿಸಿದ್ದರು. ಆದರೆ ಸುಪ್ರೀಂಕೋರ್ಟ್​​ನಲ್ಲಿ ಅರ್ಜಿ ವಿಚಾರಣೆಗೆ ಬರುವುದಕ್ಕೆ ಮುಂಚೆಯೇ ಅರ್ಜಿ ತಿರಸ್ಕೃತಗೊಂಡಿದೆ.

Key words: Actor, Darshan, petition, order, barred, bail