ಜಿಲ್ಲಾ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳಿಗೆ ಅಭಿನಂದನೆ : ಸಚಿವ ಎಸ್.ಟಿ.ಸೋಮಶೇಖರ್

Promotion

ಮೈಸೂರು,ನವೆಂಬರ್,08,2020(www.justkannada.in) : ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳಿಗೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಭಿನಂದನೆ ಸಲ್ಲಿಸಿದ್ದಾರೆ.kannada-journalist-media-fourth-estate-under-loss

ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ಪತ್ರಕರ್ತ ಆರ್.ಕೆ.ರವಿಕುಮಾರ್ ಅವರಿಗೂ ಮತ್ತು ಅವರ ತಂಡಕ್ಕೆ ಶುಭಾಶಯಗಳನ್ನು ತಿಳಿಸುತ್ತಾ ಅವರ ನೇತೃತ್ವದಲ್ಲಿ ಸಂಘದ ವತಿಯಿಂದ ಇನ್ನಷ್ಟು ಜನಪ್ರಿಯ ಕೆಲಸಗಳಾಗಲಿ, ಜನಪರ ಕಾಳಜಿಗಳನ್ನು ತೋರಲಿ ಎಂದು ಆಶಿಸುತ್ತೇನೆ ಎಂದು ಹೇಳಿದ್ದಾರೆ.

ಜೊತೆಗೆ ಇನ್ನುಳಿದಂತೆ ಆಯ್ಕೆಯಾದ ಉಪಾಧ್ಯಕ್ಷರಾದಿಯಾಗಿ ಕಾರ್ಯಕಾರಿ ಸಮಿತಿ ಸದಸ್ಯರೆಲ್ಲರಿಗೂ ಈ ಸಂದರ್ಭದಲ್ಲಿ ಶುಭ ಕೋರುತ್ತ, ಈ ಹಿಂದೆ ಅನೇಕ ಉತ್ತಮ ಕೆಲಸಗಳನ್ನು ಮಾಡಿರುವ ನಿಕಟಪೂರ್ವ ಅಧ್ಯಕ್ಷರಾದ ಸಿ.ಕೆ.ಮಹೇಂದ್ರ ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ. 

key words : District-Journalists-Association-congratulates-new officers-Minister-S.T.Somashekhar