ಕೆ.ಆರ್ ಆಸ್ಪತ್ರೆಗೆ ಸಚಿವ ಸೋಮಶೇಖರ್ ದಿಢೀರ್ ಭೇಟಿ ಹಿನ್ನೆಲೆ: ಬಿಜೆಪಿ ಶಾಸಕ ನಾಗೇಂದ್ರ ಅಸಮಾಧಾನ…

ಮೈಸೂರು,ಏಪ್ರಿಲ್,20,2021(www.justkannada.in): ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ  ಎಸ್.ಟಿ ಸೋಮಶೇಖರ್ ಕೆ.ಆರ್.ಆಸ್ಪತ್ರೆಗೆ ದಿಢೀರ್ ಭೇಟಿ ಹಿನ್ನಲೆ, ನಮಗೆ ಮಾಹಿತಿ ನೀಡದೆ ದಿಢೀರ್ ಭೇಟಿ ನೀಡಿದ್ದಾರೆಂದು  ಚಾಮರಾಜ ಕ್ಷೇತ್ರದ ಬಿಜೆಪಿ ಶಾಸಕ ನಾಗೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.jk

ಸಚಿವ ಎಸ್.ಟಿ ಸೋಮಶೇಖರ್ ಇಂದು ಕೆ.ಆರ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ತಮಗೆ ಮಾಹಿತಿ ನೀಡದಿದ್ದಕ್ಕೆ ಶಾಸಕ ನಾಗೇಂದ್ರ ಅಸಮಾಧಾನ ಹೊರ ಹಾಕಿದ್ದಾರೆ. ಸಚಿವರ ಭೇಟಿಯ ಸ್ಥಳಕ್ಕೆ ಬಂದು ಸಚಿವರ ಆಪ್ತ ಸಹಾಯಕನ ಶಾಸಕ ನಾಗೇಂದ್ರ‌ ಮುಂದೆ ಸಿಟ್ಟು ಪ್ರದರ್ಶಿಸಿದರು.minister-st-somasekhar-sudden-visit-kr-hospital-bjp-mla-nagendra

ನಮಗೆ ಏನು ಹೇಳಲೇ ಬೇಡ ಬಿಡ್ರಿ. ನಿಮಗೆ ಏನ್ ಬೇಕು ಅದನ್ನೇ ಮಾಡಿಕೊಳ್ಳಿ. ಇದು ಮುಡಾ ಚೇರ್ಮನ್‌ ಗೆ ಗೊತ್ತಾಗೋ ವಿಚಾರ. ಈ ಕ್ಷೇತ್ರದ ಶಾಸಕನಿಗೆ ಗೊತ್ತಾಗಲ್ಲ ಅಂದ್ರೆ ಏನ್ರಿ ಅರ್ಥ. ಈಗ ಅವರೇ ಬಂದಿದ್ದಾರೆ ತಾನೇ’ ಅವರೇ ಎಲ್ಲ ನೋಡಿಕೊಳ್ಳಲಿ ಎಂದು ಕೆಂಡಾಮಂಡಲರಾಗಿ ಶಾಸಕ ಕಾರುಹತ್ತಿ ಆಸ್ಪತ್ರೆಯಿಂದ ವಾಪಸ್ ತೆರಳಿದರು.

Key words:  Minister-ST  Somasekhar- sudden -visit -KR Hospital- BJP MLA- Nagendra