ಕೋವಿಡ್ ಹೆಚ್ಚಳ ಹಿನ್ನೆಲೆ: ಭಾರತದಿಂದ ಆಗಮಿಸುವ ವಿಮಾನಗಳಿಗೆ ನಿರ್ಬಂಧ ವಿಧಿಸಿದ ಆಸ್ಟ್ರೇಲಿಯಾ…

ಆಸ್ಟ್ರೇಲಿಯಾ, ಏಪ್ರಿಲ್ 27, 2021 (www.justkannada.in): ಪ್ರಪಂಚದ ಎರಡನೆಯ ಅತೀ ಹೆಚ್ಚು ಜನಸಂಖ್ಯೆಯಿರುವ ದೇಶ ಭಾರತದಲ್ಲಿ ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನು ಗಮನಿಸಿ ಆಸ್ಟ್ರೇಲಿಯಾ ಭಾರತದಿಂದ ಆಗಮಿಸುವ ನೇರ ವಿಮಾನಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ.jk

ಭಾರತದಲ್ಲಿ ಕೆಲವು ದಿನಗಳಿಂದ ಪ್ರತಿ ದಿನ 3 ಲಕ್ಷಕ್ಕೂ ಅಧಿಕ ಸಂಖ್ಯೆಯ ಕೋವಿಡ್ ಪ್ರಕರಣಗಳು ವರದಿಯಾಗುತ್ತಿದ್ದು, ಕೋವಿಡ್ ಸೋಂಕಿನಿಂದಾಗಿ ಒಂದೇ ದಿನದಲ್ಲಿ 2,771 ಸಾವುಗಳು ಸಂಭವಿಸಿವೆ. ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಅವರು ಅಲ್ಲಿನ ಸುದ್ದಿಮಾಧ್ಯಮಗಳಿಗೆ ಈ ಮಾಹಿತಿಯನ್ನು ನೀಡಿದ್ದು, ಈ ಹಿನ್ನೆಲೆಯಲ್ಲಿ ಭಾರತದಿಂದ ಆಸ್ಟ್ರೇಲಿಯಾಗೆ ಆಗಮಿಸುವ ವಿಮಾನಗಳನ್ನು ನಿಷೇಧಿಸುತ್ತಿದ್ದು, ಈ ನಿಷೇಧ ಮೇ 15ರವರೆಗೆ ಜಾರಿಯಲ್ಲಿರುತ್ತದೆ ಎಂದಿದ್ದಾರೆ.

ಭಾರತದಿಂದ ಆಸ್ಟ್ರೇಲಿಯಾದ ಸಿಡ್ನಿಗೆ ತೆರಳುವ ಎರಡು ಪ್ಯಾಸೆಂಜರ್ ಸೇವಾ ವಿಮಾನಗಳು ಹಾಗೂ ಭಾರತದಿಂದ ಡಾರ್ವಿನ್‌ಗೆ ತೆರಳುವ ಎರಡು ವಿಮಾನಗಳ ಸೇವೆಗಳ ಮೇಲೆ ಇದು ಪರಿಣಾಮ ಬೀರಿದೆ.Covid- increase –india-Australia- restricted -flights -arriving

“ನ್ಯೂ ಸೌತ್ ವೇಲ್ಸ್ ಸ್ಟೇಟ್ ಹಾಗೂ ಉತ್ತರ ಆಸ್ಟೆçÃಲಿಯಾದ ಹಲವು ಭಾಗಗಳಲ್ಲಿ ಇತ್ತೀಚೆಗೆ ವರದಿಯಾಗಿರುವ ಬಹುಪಾಲು ಕೋವಿಡ್ ಪಾಸಿಟಿವ್ ಪ್ರಕರಣಗಳು ಭಾರತದಿಂದ ಆಗಮಿಸುವವರಿಂದ ಹರಡಿದೆ. ಹಾಗಾಗಿ ಈ ಭಾಗಗಳಲ್ಲಿನ ಕ್ವಾರಂಟೈನ್ ಸೌಲಭ್ಯಗಳ ಮೇಲಿನ ಒತ್ತಡವನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆಗೊಳಿಸುವುದು ಈ ನಿಷೇಧದ ಉದ್ದೇಶವಾಗಿದೆ,” ಎಂದು ತಿಳಿಸಿದ್ದಾರೆ.

Key words: Covid- increase –india-Australia- restricted -flights -arriving