Thursday, August 27, 2026

BDA Apartments

Home Crime ಟ್ರ್ಯಾಕ್ಟರ್ ಗೆ ಕ್ರೂಸರ್ ಡಿಕ್ಕಿ: ದಂಪತಿ ಸಾವು.

ಟ್ರ್ಯಾಕ್ಟರ್ ಗೆ ಕ್ರೂಸರ್ ಡಿಕ್ಕಿ: ದಂಪತಿ ಸಾವು.

ವಿಜಯಪುರ,ಅಕ್ಟೋಬರ್,27,2022(www.justkannada.in):  ಟ್ರ್ಯಾಕ್ಟರ್ ಗೆ ಕ್ರೂಸರ್ ಡಿಕ್ಕಿಯಾಗಿ ದಂಪತಿ ಸಾವನ್ನಪ್ಪಿರುವ  ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಧೂಳಖೇಡ ಬಳಿ ನಡೆದಿದೆ.

ಧೂಳಖೇಡ ಬಳಿಯ ರಾ.ಹೆದ್ದಾರಿ 50ರಲ್ಲಿ ಈ ಘಟನೆ ನಡೆದಿದೆ. ಪತಿ ಭಯ್ಯಾಜಿ ಶಿಂಧೆ(50), ಪತ್ನಿ ಸುಮಿತ್ರಾ ಶಿಂಧೆ(45) ಮೃತ ದಂಪತಿ.  ಮೃತ ದಂಪತಿ ಬೆಳಗಾವಿ ಜಿಲ್ಲೆ ಅಥಣಿ ಮೂಲದ ನಿವಾಸಿಗಳಾಗಿದ್ದಾರೆ.

ಕಬ್ಬು ಸಾಗಿಸುತ್ತಿದ್ದ ಟ್ಯಾಕ್ಟರ್ ಗೆ ಹಿಂಬದಿಯಿಂದ ಕ್ರೂಸರ್  ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ.  ಕ್ರೂಸರ್ ವಾಹನದಲ್ಲಿದ್ದ ಒಂಬತ್ತು ಮಂದಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಅಥಣಿ ಮೂಲದ ಇವರೆಲ್ಲಾ ಕ್ರೂಸರ್ ನಲ್ಲಿ ಮಹಾರಾಷ್ಟ್ರದ ಅಕ್ಕಲಕೋಟ ಬಳಿಯ ಸ್ವಾಮಿ ಸಮರ್ಥ ಕ್ಷೇತ್ರಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಝಳಕಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಈ ಕುರಿತು ಪ್ರಕರಣ ದಾಖಲಾಗಿದೆ.

Key words: Cruiser- collided – tractor-Death – couple.