ಶಾಸಕ ಎಲ್.ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹ.

ಮೈಸೂರು,ಆಗಸ್ಟ್,2,2021(www.justkannada.in):  ಮೈಸೂರು ಭಾಗದ ಏಕೈಕ ಒಕ್ಕಲಿಗ ಶಾಸಕ ಎಲ್ ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡುವಂತೆ ಒಕ್ಕಲಿಗ ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ.

ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ  ಸಭೆ ನಡೆಸಿದ ಮೈಸೂರು ಚಾಮರಾಜ ನಗರ ಒಕ್ಕಲಿಗರ ಸಂಘದ ನಿರ್ದೇಶಕರುಗಳು ಈ ಸಂಬಂಧ ಮುಖ್ಯಮಂತ್ರಿಗೆ ಮನವಿ ನೀಡಲು ನಿರ್ಧಾರ ಮಾಡಿದ್ದಾರೆ.

ಹಲವಾರು ವರ್ಷಗಳಿಂದ  ಮೈಸೂರು ಭಾಗದಲ್ಲಿ ಯಾವುದೇ ಒಕ್ಕಲಿಗೆ ಶಾಸಕರಿಗೆ ಸಚಿವ ಸ್ಥಾನ ನೀಡಿಲ್ಲ. ಹೀಗಾಗಿ ಸಿಎಂ ಬಸವರಾಜ ಬೊಮ್ಮಯಿ ಸಚಿವ ಸಂಪುಟದಲ್ಲಿ ಶಾಸಕ ಎಲ್ ನಾಗೇಂದ್ರ ಗೆ ಸಚಿವ ಸ್ಥಾನ ನೀಡಬೇಕು ಎಂದು ಒಕ್ಕಲಿಗ ಮುಖಂಡರು ಒತ್ತಾಯಸಿದ್ದಾರೆ.

Key words: ministerial post-mysore- MLA-L. Nagendra –okkaliga- leaders-demands