Thursday, August 13, 2026

BDA Apartments

Home Front Page ಯಾವುದೇ ಭಯ, ಆತಂಕವಿಲ್ಲ: ಫಲಿತಾಂಶ ನನ್ನ ಪರ- ವಿಶ್ವಾಸ ವ್ಯಕ್ತಪಡಿಸಿದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ…

ಯಾವುದೇ ಭಯ, ಆತಂಕವಿಲ್ಲ: ಫಲಿತಾಂಶ ನನ್ನ ಪರ- ವಿಶ್ವಾಸ ವ್ಯಕ್ತಪಡಿಸಿದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ…

ಹಾಸನ,ಮೇ,22,2019(www.justkannada.in): ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು ಈ ನಡುವೆ ನಾಳಿನ ಫಲಿತಾಂಶದ ಬಗ್ಗೆ ನನಗೆ ಯಾವುದೇ ಆತಂಕ ಭಯವಿಲ್ಲ. ಫಲಿತಾಂಶ ನನ್ನ ಪರವಾಗಿ ಬರಲಿದೆ ಎಂದು ಮಂಡ್ಯ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ತಾಯಿ ಅನಿತಾ ಕುಮಾರಸ್ವಾಮಿ  ಅವರ ಜತೆ ನಿಖಿಲ್ ಕುಮಾರಸ್ವಾಮಿ ಇಂದು  ಮನೆ ದೇವರಾದ ಬೆಟ್ಟದ ರಂಗನಾಥ ಸ್ವಾಮಿ ದೇವಾಲಯ ಮತ್ತು ಹುಟ್ಟೂರು ಹರದನಹಳ್ಳಿಯ ದೇವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಫಲಿತಾಂಶದ ಬಗ್ಗೆ ಮಾತನಾಡಿದ ಅವರು, ಮಂಡ್ಯದ ಜನತೆ ನನ್ನನ್ನು ಬೆಂಬಲಿಸೋದು ನಿಶ್ಚಿತ‌. ನಾನು ಗೆಲ್ಲುತ್ತೇನೆ ಎಂದು ನಿಖಿಲ ಕುಮಾರಸ್ವಾಮಿ  ಹೇಳಿದರು.

ಇದಕ್ಕೂ ಮುನ್ನ ಇಂದು ಬೆಳಿಗ್ಗೆ ಚಿಕ್ಕಮಗಳೂರಿನ ಶೃಂಗೇರಿಗೆ ಭೇಟಿ ನೀಡಿ ನಿಖಿಲ್ ಕುಮಾರಸ್ವಾಮಿ ಶಾರದಾಂಬೆ ದರ್ಶನ ಪಡೆದರು. ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ನಾನು ಯಾವುದೇ ಸಮೀಕ್ಷೆಗಳನ್ನು ಪರಿಗಣಿಸುವುದಿಲ್ಲ. 2004ರಲ್ಲಿ ಎರಡು ಸೀಟ್ ಜೆಡಿಎಸ್ ಬರುತ್ತದೆ ಎಂದು ಸಮೀಕ್ಷೆಗಳು ಹೇಳಿದ್ದವು. ಸಮೀಕ್ಷೆಗಳೆಲ್ಲವೂ ನಿಜ ಆಗಲ್ಲ. ಮಂಡ್ಯದ ಜನ ನನಗೆ ಆಶೀರ್ವಾದ ಮಾಡಿದ್ದಾರೆ. ನಾಳೆ 10 ಗಂಟೆ ವೇಳೆಗೆ ಎಲ್ಲವೂ ತಿಳಿಯುತ್ತದೆ ಎಂದರು.

Key words: No fear, The result comes to my side- Nikhil Kumaraswamy

#politicalnews nikilkumaraswamy #result #hassan