ಮೈಸೂರು ದಸರಾ ಗಜಪಯಣಕ್ಕೆ ಕ್ಷಣಗಣನೆ: ಮೊದಲ ತಂಡದ 6 ಆನೆಗಳ ವಿವರ ಇಲ್ಲಿದೆ ನೋಡಿ…

ಮೈಸೂರು,ಆ,22,2019(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಗಜಪಯಣಕ್ಕೆ ಕ್ಷಣಗಣನೆ ಆರಂಭವಾಗಿದೆ.

ಹುಣಸೂರಿನ ವೀರನ ಹೊಸಹಳ್ಳಿಯಿಂದ ಮೊದಲ ತಂಡದ 6 ಆನೆಗಳು  ಇಂದು ಮೈಸೂರಿನತ್ತ ಹೆಜ್ಜೆ ಹಾಕಲಿವೆ. ವೀರನ ಹೊಸಹಳ್ಳಿಯಲ್ಲಿ ಕ್ಯಾಪ್ಟನ್ ಅರ್ಜುನನಿಗೆ  ಅರಿಸಿಣ ಕುಂಕುಮ ಹಚ್ಚಿ ಪೂಜೆ ಸಲ್ಲಿಸಲಾಗಿದೆ. ಮೈಸೂರಿಗೆ ಆಗಮಿಸುವ ಅರ್ಜುನ  ಅಂಡ್ ಟೀಂ ಗೆ ಭವ್ಯ ಸ್ವಾಗತ ಸಿಗಲಿದೆ.

ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2019ರಲ್ಲಿ ಭಾಗಿಯಾಗುವ ಮೊದಲ ತಂಡದ 6 ಆನೆ ಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..

೧.ಅರ್ಜುನ (ಗಂಡು)

59 ವರ್ಷ

ಬಳ್ಳೆ ಆನೆ ಶಿಬಿರ

ಮಾವುತ ವಿನು

ಕಾವಾಡಿ ಮಧು

19-20 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗಿ, 2012 ರಿಂದ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ.

 

೨.ವಿಜಯ (ಹೆಣ್ಣು)

62 ವರ್ಷ.ದುಬಾರೆ

ಆನೆ ಶಿಬಿರ.

ಮಾವುತ: ಭೋಜಪ್ಪ

ಕವಾಡಿ:ಭರತ್

12 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗಿ.

 

೩.ಅಭಿಮನ್ಯು (ಗಂಡು)

53 ವರ್ಷ

ಮತ್ತಿಗೋಡು ಆನೆ ಶಿಬಿರ.

ಮಾವುತ :ವಸಂತ

ಕವಾಡಿ:ರಾಜು

20 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗಿ.

 

೪.ವರಲಕ್ಷ್ಮೀ(ಹೆಣ್ಣು)

63 ವರ್ಷ ಮತ್ತಿಗೂಡು

ಆನೆ ಶಿಬಿರ.

ಮಾವುತ ರವಿ.ಜೆ.ಕೆ

ಕವಾಡಿ ಮಾದೇಶ

10 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗಿ

 

೫ ಧನಂಜಯ(ಗಂಡು)

36 ವರ್ಷ  ದುಬಾರೆ ಆನೆ ಶಿಬಿರ.

ಮಾವುತ ಭಾಸ್ಕರ್ ಜೆ.ಸಿ

ಕಾವಾಡಿ ಸೂನ್ಯ ಜೆ.ಬಿ

ಎರಡನೇ ಬಾರಿ ದಸರ ಮಹೋತ್ಸವದಲ್ಲಿ ಭಾಗಿ.

 

೬.ಈಶ್ವರ ( ಗಂಡು)

49 ವರ್ಷ

ದುಬಾರೆ ಆನೆ ಶಿಬಿರ

ಮಾವುತ ವಿಶ್ವನಾಥ

ಕಾವಾಡಿ ವಿಜಯ

ಮೊದಲ ಬಾರಿಗೆ ದಸರಾ ಮಹೋತ್ಸವಕ್ಕೆ ಆಯ್ಕೆ.

 

 

Key words: Countdown – Mysore Dasara- Gajapayana