‘ದೇವ್ಲೇ ದೇವ್ಲೇ..’ ಎನ್ನುತ್ತಿದ್ದಾರೆ ಯೋಗರಾಜ್ ಭಟ್ ! ‘ಗಾಳಿಪಟ 2’ ಚಿತ್ರದ ಮತ್ತೊಂದು ಸಾಂಗ್ ರಿಲೀಸ್

ಬೆಂಗಳೂರು, ಜುಲೈ 15, 2022 (www.justkannada.in): ‘ಗಾಳಿಪಟ 2’ ಚಿತ್ರದ ಮತ್ತೊಂದು ಹಾಡು ರಿಲೀಸ್ ಆಗಿದ್ದು, ಯೂಟ್ಯೂಬ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ಯೋಗರಾಜ್​ ಭಟ್ ಬರೆದ ‘ದೇವ್ಲೇ ದೇವ್ಲೇ..’ ಹಾಡು ಸಾಕಷ್ಟು ಮೆಚ್ಚುಗೆ ಗಳಿಸುತ್ತಿದೆ. ಈ ಹಾಡಿನಲ್ಲಿ ‘ದೇವ್ರೇ ದೇವ್ರೇ..’ ಅಂತ ಬರೆಯುವ ಬದಲು ‘ದೇವ್ಲೇ ದೇವ್ಲೇ..’ ಬರೆತಿದ್ದು, ವಿಡಂಬನಾತ್ಮಕ ಸಾಲುಗಳು ಎಂದಿನಂತೆ ಗಮನ ಸೆಳೆಯುತ್ತಿವೆ.

‘ದೇವ್ರೇ ದೇವ್ರೇ..’ ಅಂತ ಬರೆಯುವ ಬದಲು ‘ದೇವ್ಲೇ ದೇವ್ಲೇ.. ಅಂತ ಬರೆದಿರುವುದು ಯಾಕೆ? ಈ ಬಗ್ಗೆ ಸ್ವತಃ ಯೋಗರಾಜ್​ ಭಟ್​ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಅಂದಹಾಗೆ ಎಂ.ರಮೇಶ್​ ರೆಡ್ಡಿ ನಿರ್ಮಾಣದ ಈ ಚಿತ್ರದಲ್ಲಿ ‘ಗೋಲ್ಡನ್​ ಸ್ಟಾರ್’​ ಗಣೇಶ್​, ಪವನ್​ ಕುಮಾರ್​, ದಿಗಂತ್​, ಶರ್ಮಿಳಾ ಮಾಂಡ್ರೆ ಮುಂತಾದವರು ನಟಿಸಿದ್ದಾರೆ.