ಸ್ಯಾಂಡಲ್’ವುಡ್’ ಶುಕ್ರವಾರ: ಸಾಲು, ಸಾಲು ಸಿನಿಮಾಗಳು ರಿಲೀಸ್ !

ಬೆಂಗಳೂರು, ಜುಲೈ 15, 2022 (www.justkannada.in): ಸ್ಯಾಂಡಲ್ ವುಡ್’ನಲ್ಲಿಇಂದು ಮ್ಯಾರಥಾನ್ ಶುಕ್ರವಾರ! ಹಲವಾರು ಸಿನಿಮಾಗಳು ಇಂದು ಬಿಡುಗಡೆಯಾಗಿ ಅದೃಷ್ಟ ಪರೀಕ್ಷೆಗೆ ಸಜ್ಜಾಗಿವೆ.

ಆಷಾಢ ಜತೆಗೆ ಸತತ ಮಳೆ ಯಾವುದನ್ನೂ ಲೆಕ್ಕಿಸದೆ ಈ ಶುಕ್ರವಾರ ಹಲವು ಕನ್ನಡ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಒಂದಕ್ಕಿಂತಲೂ ಒಂದು ಭಿನ್ನ ಜಾನರ್‌ನ ಸಿನಿಮಾಗಳು ಈ ವಾರ ಬರುತ್ತಿವೆ. ಇದರಲ್ಲಿ ಯಾವುದು ಗೆಲ್ಲಲಿದೆ, ಯಾವುದು ಥಿಯೇಟರ್ ನಿಂದ ಎತ್ತಂಗಡಿಯಾಗಲಿದೆ ಎಂಬದನ್ನು ಕಾದು ನೋಡಬೇಕಿದೆ.

‘ಪೆಟ್ರೊಮ್ಯಾಕ್ಸ್’: ಸತೀಶ್ ನೀನಾಸಂ, ಹರಿಪ್ರಿಯ, ನಾಗಭೂಷಣ್, ಅಚ್ಯುತ್ ಕುಮಾರ್, ಸುಧಾ ಬೆಳವಾಡಿ ಇನ್ನಿತರರು ನಟಿಸಿರುವ ‘ಪೆಟ್ರೊಮ್ಯಾಕ್ಸ್’ ಸಿನಿಮಾ ಇಂದು ಬಿಡುಗಡೆ ಆಗಲಿದೆ.

 ‘ಬೆಂಕಿ’: ಅಣ್ಣ-ತಂಗಿಯ ಭಾವುಕ ಬಾಂಧವ್ಯದ ‘ಬೆಂಕಿ’ ಕೂಡ ಇಂದು ರಿಲೀಸ್ ಆಗಲಿದೆ. ಅನೀಶ್ ನಾಯಕ ನಟನಾಗಿ ನಟಿಸಿರುವ ಈ ಸಿನಿಮಾದಲ್ಲಿ ನಾಯಕನ ತಂಗಿಯ ಮಾತ್ರವೂ ಪ್ರಧಾನಾವಿದ್ದು ಈ ಪಾತ್ರದಲ್ಲಿ ಬೆಳಗಾವಿ ಬೆಡಗಿ ಶ್ರುತಿ ಪಾಟೀಲ್ ನಟಿಸಿದ್ದಾರೆ.

‘ಚೇಸ್’: ಥ್ರಿಲ್ಲರ್ ಕತೆಯುಳ್ಳ ‘ಚೇಸ್’ ಸಿನಿಮಾವನ್ನು ವಿಲೋಕ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ.

‘ಪದ್ಮಾವತಿ’: ಆಕ್ಷನ್ ಭರಿತ ಪ್ರೇಮಕತೆ ‘ಪದ್ಮಾವತಿ’ ಕನ್ನಡ ಸಿನಿಮಾ ಜುಲೈ 15 ರಂದು ಬಿಡುಗಡೆ ಆಗಲಿದೆ.  ವಿಕ್ರಂ ಆರ್ಯ, ಸಾಕ್ಷಿ ಮೇಘನಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

‘ಓಹ್ ಮೈ ಲವ್’: ಕಾಲೇಜು ಹುಡುಗರ ಪ್ರೇಮಕತೆಯುಳ್ಳ ‘ಓಹ್ ಮೈ ಲವ್’ ಸಿನಿಮಾ ಸಹ ಇದೇ ವಾರ ತೆರೆಗೆ ಬರುತ್ತಿದೆ. ಸ್ನೇಹ, ಪ್ರೀತಿಗೆ ಪ್ರಾಣ ಕೊಡುವ ರಗಡ್ ಹುಡುಗನ ಕತೆಯನ್ನು ಈ ಸಿನಿಮಾ ಹೊಂದಿದೆ. ಅಕ್ಷಿತ್ ಶಶಿಕುಮಾರ್, ಕೀರ್ತಿ ಕಲಕೇರಿ ನಾಯಕ-ನಾಯಕಿಯಾಗಿ ನಟಿಸಿದ್ದಾರೆ.