ಡಿಸಿ ರೋಹಿಣಿ ಸಿಂಧೂರಿ ವಿರುದ್ಧದ ಆರೋಪಗಳಿಗೆ ಶಿಲ್ಪಾನಾಗ್ ಬಳಿ ದಾಖಲೆ ಕೇಳಿದ ಸಿಎಸ್..?

ಮೈಸೂರು,ಜೂನ್,4,2021(www.justkannada.in):  ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಮತ್ತು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಸಂಘರ್ಷ ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಈ ಮಧ್ಯೆ ಶಿಲ್ಪಾನಾಗ್ ಅವರಿಗೆ ಮುಖ್ಯಕಾರ್ಯದರ್ಶಿ ರವಿಕುಮಾರ್, ಈ ಆರೋಪಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನ ನೀಡುವಂತೆ ಕೇಳಿದ್ದಾರೆ.

jk

ನಿನ್ನೆ ಸುದ್ಧಿಗೋಷ್ಠಿ ನಡೆಸಿ ಡಿಸಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಶಿಲ್ಪಾನಾಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದೇ ವಿಚಾರವಾಗಿ ಶಿಲ್ಪಾನಾಗ್ ಅವರನ್ನ ತರಾಟೆ ತೆಗೆದುಕೊಂಡು ನಿನ್ನೆಯ ಸುದ್ದಿಗೋಷ್ಠಿ ಬಗ್ಗೆ ದಾಖಲೆಗಳನ್ನು  ಸಿಎಸ್ ರವಿಕುಮಾರ್ ಕೇಳಿದರು ಎನ್ನಲಾಗಿದೆ.

ನೀವು ನಿನ್ನೆ ಏಕಾಏಕಿ ಹೇಗೆ ಸುದ್ಧಿಗೋಷ್ಠಿ ನಡೆಸಿದ್ರಿ. ಸುದ್ದಿಗೋಷ್ಠಿ ನಡೆಸುವ ಅಗತ್ಯತೆ ಏನಿತ್ತು?  ಯಾವ ಆಧಾರದಲ್ಲಿ ನೀವು ಸುದ್ದಿಗೋಷ್ಠಿ ನಡೆಸಿದ್ರಿ. ಸುದ್ದಿಗೋಷ್ಠಿ ನಡೆಸುವ ಉದ್ದೇಶ ಏನಿತ್ತು. ನನಗೆ ಈ ವಿಚಾರದಲ್ಲಿ ದೂರು ನೀಡಬಹುದಿತ್ತು. ಏಕಾಏಕಿ ಸುದ್ದಿಗೋಷ್ಠಿ ನಡೆಸಿದ್ದಿ ಆಡಳಿತಾತ್ಮಕ ಉಲ್ಲಂಘನೆ ಅಲ್ಲವೆ?  ಈಗ ಡಿಸಿ ವಿರುದ್ಧ ಮಾಡಿರುವ ಆರೋಪಗಳಿಗೆ ದಾಖಲೆ ಇದೆಯಾ ಎಂದು ಶಿಲ್ಪಾನಾಗ್ ಅವರಿಗೆ ಸಿಎಸ್ ರವಿಕುಮಾರ್ ಪ್ರಶ್ನಿಸಿದರು ಎನ್ನಲಾಗಿದೆ.

ಇದೇ ವೇಳೆ ಕೆಲವೊಂದು  ವಾಟ್ಸಾಪ್ ಗ್ರೂಪ್ ನಿಂದ ತಮ್ಮನ್ನು ಎಕ್ಸಿಟ್ ಮಾಡಿರುವ ಬಗ್ಗೆ ಶಿಲ್ಪಾನಾಗ್ ದೂರಿದರು. ಈ ಸಮಯದಲ್ಲಿ ನಿಮ್ಮ ಬಳಿ ದಾಖಲೆ ಇದ್ದರೆ ದಾಖಲೆ ಸಮೇತ ವಿವರಣೆ‌ ನೀಡಿ ಎಂದು ಸಿಎಸ್ ರವಿಕುಮಾರ್  ಶಿಲ್ಪಾನಾಗ್ ಅವರಿಗೆ ತಿಳಿಸಿದರು ಎಂದು ತಿಳಿದು ಬಂದಿದೆ.

Key words: CS –Ravikumar-class-corporation- Commissioner -Shilpanag.