ಆಲ್ಕೋಹಾಲ್, ಧೂಮಪಾನದಿಂದ ದೂರವಿರಿ: ಇದೇ ಬ್ಯೂಟಿ ಸಿಕ್ರೇಟ್ ಎಂದ ಐಶ್ವರ್ಯ ರೈ

ಮುಂಬೈ, ಆಗಸ್ಟ್ 22, 2019 (www.justkannada.in): ಹೆಣ್ಣು ಮಕ್ಕಳು ಹೆಚ್ಚು ಆಲ್ಕೋಹಾಲ್ ಮತ್ತು ಧೂಮಪಾನ ಮಾಡಬಾರದು ಇದೇ ಬ್ಯೂಟಿ ಸಿಕ್ರೇಟ್ ಎಂದು ನಟಿ ಐಶ್ವರ್ಯ ರೈ ಬಚ್ಚನ್ ಸಲಹೆ ನೀಡಿದ್ದಾರೆ.

ತಮ್ಮ ಸೌಂದರ್ಯದ ಸಿಕ್ರೇಟ್ ಬಿಚ್ಚಿಟ್ಟಿರುವ ಮಾಜಿ ವಿಶ್ವ ಸುಂದರಿ. ಧೂಮಪಾಮ, ಮದ್ಯಪಾನದಿಂದ ನಿಮ್ಮ ಸೌಂದರ್ಯ ಹಾಳಾಗುತ್ತದೆ ಎಂದಿದ್ದಾರೆ.

ದುಬಾರಿ ಬೆಲೆಯ ಕಾಸ್ಮೆಟಿಕ್ ಗಳನ್ನು ಉಪಯೋಗಿಸದೇ, ಮನೆಯಲ್ಲಿರುವ ಪದಾರ್ಥಗಳನ್ನು ಉಪಯೋಗಿಸಿಕೊಂಡು ತಮ್ಮ ಚರ್ಮವನ್ನು ಕಾಪಾಡಿಕೊಳ್ಳುತ್ತೇನೆ.

ನೈಸರ್ಗಿಕವಾಗಿ ಸಿಗುವ ಅರಿಶಿಣ, ಕಡ್ಲೆ ಹಿಟ್ಟು, ರೋಸ್ ವಾಟರ್ ಹಾಗೂ ಹಾಲು, ಮೊಸರು ಇವುಗಳನ್ನು ಬಳಸಿಕೊಂಡು ಫೇಸ್ ಪ್ಯಾಕ್ ಮಾಡುತ್ತೇನೆ ಎಂದು ಸಲಹೆ ನೀಡಿದ್ದಾರೆ.  ಡಯಟ್ ಸೀಕ್ರೆಟ್ಸ್ ಎಂದರೆ ಸದಾ ಕಾಲ ಮನೆಯಲ್ಲಿ ಮಾಡುವ ಊಟ ಮಾಡುವುದಂತೆ.