ಟ್ರಾಫಿಕ್ ಸಮಸ್ಯೆಯನ್ನು ಪರಿಹರಿಸಲಿದೆ ಕೃತಕ ಬುದ್ಧಿಮತ್ತೆ

ಬೆಂಗಳೂರು:ಆ-22:(www.justkannada.in) ನೈಸರ್ಗಿಕ ವಿಧಾನಗಳ ಮೂಲಕ ಕೃತಕ ಬುದ್ಧಿಮತ್ತೆ ಬಳಸಿಕೊಂಡು ಸಂಚಾರ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಅವರು ಐಐಎಸ್ ಸಿ ಪ್ರಾದ್ಯಾಪಕರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಸಂಶೋಧಕರ ತಂಡವು ಬೆಂಗಳೂರಿನ ಸಂಚಾರ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವಲ್ಲಿ ತೀವ್ರ ಆಸಕ್ತಿಯನ್ನು ಹೊಂದಿದ್ದು, ಬೆಂಗಳೂರು ನಗರದ ಸಂಚಾರ ಸಮಸ್ಯೆಗಳನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರಿಗೆ ಕೃತಕ ಬುದ್ದಿಮತ್ತೆ ಮೂಲಕ ಟ್ರಾಫಿಕ್ ಸಮಸ್ಯೆ ಪರಿಹರಿಸುವ ವಿಧಾನಗಳ ಬಗ್ಗೆ ಪ್ರಸ್ತಾವನೆ ಕಳುಹಿಸಿತ್ತು.

ಈ ನಿಟ್ಟಿನಲ್ಲಿ ಐಐಎಸ್ ಸಿ ಪ್ರಾಧ್ಯಾಪಕ ಆಶಿಶ್ ವರ್ಮಾ ಮತ್ತು ಸಿವಿಲ್ ಎಂಜಿನಿಯರಿಂಗ್ ವಿಭಾಗದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಯ ಪ್ರೊಫೆಸರ್ ಅಬ್ದುಲ್ ಪಿಂಜಾರಿ ಅವರೊಂದಿಗೆ ಈ ಬಗ್ಗೆ ಸಭೆ ನಡೆಸಿ ಚರ್ಚಿಸಿದ್ದಾರೆ. ಪ್ರಯಾಣದ ಬೇದಿಕೆಗಳಿಗೆ ಅನುಗುಣವಾಗಿ ಟ್ರಾಫಿಕ್ ಸಿಗ್ನಲ್ ಗಳ ಆಧಾರದ ಮೇಲೆ ಕೃತಕ ಬುದ್ಧಿಮತ್ತೆ (ಆರ್ಟಿಫಿಶಲ್ ಇಂಟಲಿಜನ್ಸ್) ಮತ್ತು ಯಂತ್ರಗಳ ಸಹಾಯದಿಂದ ಸಂಚಾರದಟ್ಟಣೆಯನ್ನು ಊಹಿಸಿ, ಅವುಗಳನ್ನು ನಿಯಂತ್ರಿಸುವ ಬಗ್ಗೆ ಐಐಎಸ್ಸಿ ತಂಡ ಸಣ್ಸದರಿಗೆ ಮಾಹಿತಿ ನೀಡಿದೆ.

ಈ ಕುರಿತು ಪ್ರೊ.ಆಶಿಶ್ ವರ್ಮಾ, ನಮ್ಮ ಅಧ್ಯಯನಗಳ ಆಧಾರದ ಮೇಲೆ ‘ಎಲಿವೇಟೆಡ್ ಕಾರಿಡಾರ್ ಯೋಜನೆಯ ಸಿಮ್ಯುಲೇಶನ್ ಸ್ಟಡಿ’ ಮತ್ತು ‘ಕ್ಲೈಮಟ್ರಾನ್ಸ್ ವರದಿ – ವಾಸಯೋಗ್ಯ ಬೆಂಗಳೂರಿಗೆ ಸುಸ್ಥಿರ ಸಾರಿಗೆ ಕ್ರಮಗಳು’, ನಗರದ ಸಂಚಾರ ಪರಿಸ್ಥಿತಿಯನ್ನು ಪರಿವರ್ತಿಸಲು ನಾವು ಹಲವಾರು ತಾಂತ್ರಿಕ ಕ್ರಮಗಳನ್ನು ಸೂಚಿಸಿದ್ದೇವೆ ಎಂದು ತಿಳಿಸಿದ್ದಾರೆ.

ರಸ್ತೆ ಮೂಲಸೌಕರ್ಯ ಆಧಾರಿತ ಯೋಜನೆಗಳು ನಗರದ ಸಂಚಾರ ದಟ್ಟಣೆಯನ್ನು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸುವಂತಾಗಿದೆ. ಸಂಚಾರ ಸಾರಿಗೆ ವಿಷಯದಲ್ಲಿ ನಾವು ಏನಲ್ಲಾ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ ಎಂಬ ಬಗ್ಗೆ ಚರ್ಚೆ ನಡೆಸಿದ್ದೆವೆ. ವೈಯಕ್ತಿಕ ವಾಹನಗಳ ಹೆಚ್ಚಾದ ಬಳಕೆ ಹಾಗೂ ಅವುಗಳು ಹೊರಬಿಡುವ ಹೊಗೆಯಿಂದಾಗಿ ಮಾಲಿನ್ಯ ಹಾಗೂ ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಪ್ರಯಾಣಿಕರನ್ನು ವೈಯಕ್ತಿಕ ಸಾರಿಗೆಯಿಂದ ಹೊರತಂದು ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಉಪಯೋಗಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ನೀತಿಗಳನ್ನು ಜಾರಿಗೆ ತರುವ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಿದ್ದಾಗಿ ತಿಳಿಸಿದ್ದಾರೆ.

ಸಾರ್ವಜನಿಕ ಸಾರಿಗೆಯ ವಿಧಾನಗಳು ಒಂದಕ್ಕೊಂದು ಪೂರಕವಾಗಿರಬೇಕು ಮತ್ತು ನಗರದಲ್ಲಿ ವಾಕಿಂಗ್ ಮತ್ತು ಸೈಕ್ಲಿಂಗ್ ಮೂಲಸೌಕರ್ಯಕ್ಕೆ ಆದ್ಯತೆ ನೀಡಬೇಕು ಎಂದು ಸಮ್ಸದರು ಸಕಾರಾತ್ಮಕವಾಗಿ ಸ್ಪಂದಿಸಿರುವುದಾಗಿ ವಿವವರಿಸಿದ್ದಾರೆ.

ಟ್ರಾಫಿಕ್ ಸಮಸ್ಯೆಯನ್ನು ಪರಿಹರಿಸಲಿದೆ ಕೃತಕ ಬುದ್ಧಿಮತ್ತೆ

Artificial intelligence to solve traffic woes