ಮೈಸೂರು ಪಾಲಿಕೆಗೆ ಅತ್ಯಾಧುನಿಕ ಟ್ರಕ್ ಹಸ್ತಾಂತರ: ನಗರದ ಸ್ವಚ್ಛತೆ ಮತ್ತಷ್ಟು ಸರಾಗ….

ಮೈಸೂರು,ಜು,9,2020(www.justkannada.in): ಸ್ವಚ್ಛತಾ ನಗರಿ ಎಂದು ಖ್ಯಾತಿ ಪಡೆದಿರುವ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸ್ವಚ್ಚತೆ ಇದೀಗ ಮತ್ತಷ್ಟು ಸರಾಗವಾಗಲಿದೆ. ಅತ್ಯಾಧುನಿಕ ಸ್ವಚ್ಛತಾ ಯಂತ್ರ ಅಳವಡಿಕೆಯಾಗಿರುವ ಟ್ರಕ್  ಅನ್ನ ಮೈಸೂರು ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಲಾಗಿದ್ದು, ಈ ಟ್ರಕ್ ನಗರದ ಅಂದವನ್ನು ಮತ್ತಷ್ಟು ಹೆಚ್ಚಿಸಲಿದೆ.jk-logo-justkannada-logo

ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ,  ಅವರು ಸ್ವಚ್ಛತಾ ಯಂತ್ರ ಅಳವಡಿಕೆಯಾಗಿರುವ ಟ್ರಕ್ ಅನ್ನ ಮೈಸೂರು ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಿದರು. ಪ್ರಧಾನಿ ಮೋದಿಯವರ ಸ್ವಚ್ಛ ಭಾರತದ ಯೋಜನೆಯ ಅಡಿಯಲ್ಲಿ ಅತ್ಯಾಧುನಿಕ ಸ್ವಚ್ಛತಾ ಟ್ರಕ್ ಪಾಲಿಕೆಗೆ ನೀಡಲಾಗಿದೆ.cleaning-truck-mysore-city-corporation-mp-prathap-simha

ಸಂಸದ ಪ್ರತಾಪ್ ಸಿಂಹ ಮನವಿ ಮೇರೆಗೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ವತಿಯಿಂದ ಅತ್ಯಾಧುನಿಕ ಟ್ರಕ್  ಅನ್ನ ಪಾಲಿಕೆಗೆ ಹಸ್ತಾಂತರಿಸಲಾಗಿದ್ದು, ಸಾಂಕೇತಿಕವಾಗಿ ಐಒಸಿ ಅಧಿಕಾರಿಗಳು ಕೀಲಿಕೈ ಹಸ್ತಾಂತರಿಸಿದರು. ಟ್ರಕ್ ನಲ್ಲಿ ಅತ್ಯಾಧುನಿಕ ಸೌಲಭ್ಯ ಅಳವಡಿಕೆ ಮಾಡಲಾಗಿದ್ದು, ಈ ಅತ್ಯಾಧುನಿಕ ಟ್ರಕ್ ನಿಂದ ನಗರದ ಸ್ವಚ್ಛತೆ ಮತ್ತಷ್ಟು ಸುಲಭವಾಗಲಿದೆ.

Key words: Cleaning- Truck- Mysore –city corporation-mp-prathap simha