ಉದ್ಯಮಿ ಸಿದ್ಧಾರ್ಥ್ ಸಾವಿನ ಬಗ್ಗೆ ಸಮಗ್ರ ತನಿಖೆಯಾಗಲಿ- ಮಾಜಿ ಸಚಿವ ಸತೀಶ್ ಜಾರಕಿಹೊಳಿ ಆಗ್ರಹ…

Promotion

ಬೆಂಗಳೂರು,ಜು,31,2019(www.justkannada.in): ಉದ್ಯಮಿ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರ ಸಾವಿನ ಬಗ್ಗೆ ಸಮಗ್ರ ತನಿಖೆಯಾಗಲಿ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಆಗ್ರಹಿಸಿದರು.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸತೀಶ್ ಜಾರಕಿಹೊಳಿ, ರಾಜ್ಯ ಒಳ್ಳೆಯ ಉದ್ಯಮಿಯನ್ನ ಕಳೆದುಕೊಂಡಿದೆ.ಸಿದ್ಧಾರ್ಥ್ ಸಾವಿನ ಬಗ್ಗೆ ಸಮಗ್ರ ತನಿಖೆಯಾಗಬೇಕು. ತನಿಖೆಯಾದರೇ  ಈ  ಕುರಿತು ಸತ್ಯಾಂಶ ಹೊರ ಬರಲಿದೆ ಎಂದು ಹೇಳಿದರು.

ಹಾಗೆಯೇ ಐಟಿ ಅಧಿಕಾರಿಗಳ ಕಿರುಕುಳ ಶಂಕೆ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಐಟಿಯವರ ಕಿರುಕುಳ ಹೊಸದೇನಲ್ಲ. ಬಹಳಷ್ಟು ನಡೆದಿದೆ. ಸಿದ್ಧಾರ್ಥ್ ಸಾವಿಗೆ ನ್ಯಾಯ ದೊರಕಬೇಕು ಎಂದರು.

key words: comprehensive- investigation -death – businessman –Siddharth-Former minister- Satish jarakiholi