ಬಿಟ್ ಕಾಯಿನ್ ಬಗ್ಗೆ ಗೊತ್ತಿಲ್ಲ: ಸಿಎಂ ಬೊಮ್ಮಾಯಿ ಅವರು ಅವಧಿ ಪೂರ್ಣಗೊಳಿಸುತ್ತಾರೆ- ಸಚಿವ ಭೈರತಿ ಬಸವರಾಜು.

 

ದಾವಣಗೆರೆ,ನವೆಂಬರ್,18,2021(www.justkannada.in):   ಸಿಎಂ ಬೊಮ್ಮಾಯಿ ಅವರು ಅವಧಿ ಪೂರ್ಣಗೊಳಿಸುತ್ತಾರೆ.  ಮುಂದೆಯೂ ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ ಎಂದು ಸಚಿವ ಭೈರತಿ ಬಸವರಾಜ್ ತಿಳಿಸಿದರು.

ದಾವಣಗೆರೆಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಭೈರತಿ ಬಸವರಾಜ್, ಬಿಟ್ ಕಾಯಿನ್ ಅಂದ್ರೆ ಏನೇಂದು ಗೊತ್ತಿಲ್ಲ. ಮೈಸೂರು ಬ್ಯಾಂಕ್, ನ್ಯಾಷನಲ್ ಬ್ಯಾಂಕ್ ಅಷ್ಟೇ ಗೊತ್ತು. ಅದನ್ನ ಬಿಟ್ಟು ಇದ್ಯಾವುದೋ ಬಿಟ್ ಕಾಯಿನ್ ಗೊತ್ತಿಲ್ಲ. ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಭವಿಷ್ಯ ಹೇಳುತ್ತಿರಬಹುದು ಎಂದು ವ್ಯಂಗ್ಯವಾಡಿದರು.

ಬಿಟ್ ಕಾಯಿನ್ ಬಗ್ಗೆ ತನಿಖೆ ನಡೆಯುತ್ತಿದೆ. ಯಾರು ಎಲ್ಲಿ ನಾಪತ್ತೆಯಾಗಿದ್ದಾರೆ ಗೊತ್ತಿಲ್ಲ.  ಸಿಎಂ ಬೊಮ್ಮಾಯಿ ಅವರು ಅವಧಿ ಪೂರ್ಣಗೊಳಿಸುತ್ತಾರೆ.  ಮುಂದೆಯೂ ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ ಎಂದರು.

Key words: Don’t- know –about- bitcoin – Minister -Bhairati Basavaraju