ಕೆಆರ್ ಎಸ್ ಜಲಾಶಯ ಭರ್ತಿ:  ನೀರಿನ ಹೊರ ಹರಿವಿನ ಪ್ರಮಾಣ ಹೆಚ್ಚಳ.

ಮಂಡ್ಯ,ನವೆಂಬರ್,18,2021(www.justkannada.in):  ರಾಜ್ಯದ ಹಲವೆಡೆ ಮತ್ತೆ ಮಳೆರಾಯನ ಅಬ್ಬರ ಜೋರಾಗಿದ್ದು , ನಿನ್ನೆ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ನಿರಂತರ  ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದೆ. ಈ ಮಧ್ಯೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ ಎಸ್  ಜಲಾಶಯ ಭರ್ತಿಯಾಗಿದ್ದು ಜಲಾಶಯದ ನೀರಿನ ಹೊರ ಹರಿವಿನ ಪ್ರಮಾಣ ಹೆಚ್ಚಳವಾಗಿದೆ.

ಕೆ.ಆರ್ ಎಸ್ ಡ್ಯಾಂನ ನೀರಿನ ಹೊರ ಹರಿವಿನ ಪ್ರಮಾಣ ಹೆಚ್ಚಳ ಹಿನ್ನೆಲೆ  ಶ್ರೀರಂಗಪಟ್ಟಣದ ಗಂಜಾಂನ ಕಾವೇರಿ ನದಿ ದಡದಲ್ಲಿರುವ ನಿಮಿಷಾಂಬ ದೇಗುಲದ ಬಳಿ ಭಕ್ತರ ಸ್ನಾನಕ್ಕೆ ನಿರ್ಬಂಧ ವಿಧಿಸಲಾಗಿದೆ. ಸ್ನಾನಘಟ್ಟದ ಬಳಿ ಯಾರು ಹೋಗದಂತೆ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ. ಹಾಗೆಯೇ ನದಿದಡದತ್ತ ಯಾರು ಹೋಗದಂತೆ ತಾಲ್ಲೂಕು ಆಡಳಿತ ಸೂಚನೆ ನೀಡಿದೆ.kabini-reservoir-krs-dam-water-level-rise

ಮಂಡ್ಯಜಿಲ್ಲೆಯಲ್ಲಿ ಭಾರಿ ಮಳೆಗೆ ಜನರು ತತ್ತರಿಸಿದ್ದು ಮಳೆಯಿಂದಾಗಿ 35ಕ್ಕೂ ಹೆಚ್ಚು ಮನೆಗಳು ಕುಸಿದಿದ್ದು ಜಿಲ್ಲೆಯಲ್ಲಿ ಈವರಗೆ 150ಕ್ಕೂ ಹೆಚ್ಚು ಮನೆಗಳು ಮಳೆಯಿಂದ ಕುಸಿದಿವೆ ಎನ್ನಲಾಗಿದೆ.

Key words:  KRS- reservoir- fill-Increase –water- flow rate.