ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ: ಮೈಸೂರು ಜಿಲ್ಲೆಯಲ್ಲಿ 11 ಕಂಟ್ರೋಲ್ ರೂಂ ಸ್ಥಾಪನೆ.

ಮೈಸೂರು,ನವೆಂಬರ್,18,2021(www.justkannada.in):  ರಾಜ್ಯದಲ್ಲಿನ ವಿಧಾನಪರಿಷತ್ ಹಿನ್ನೆಲೆ ಮೈಸೂರು ಜಿಲ್ಲೆಯಲ್ಲಿ ಚುನಾವಣೆ ಕಾರ್ಯ ಚಟುವಟಿಕೆಗೆ ಜಿಲ್ಲಾಡಳಿತ ಸಿದ್ದತೆ ನಡೆಸಿದ್ದು ಜಿಲ್ಲೆಯಲ್ಲಿ ಒಟ್ಟು 11 ಕಂಟ್ರೋಲ್ ರೂಂ ಸ್ಥಾಪನೆ ಮಾಡಲಾಗಿದೆ.

ರಾಜ್ಯದ ವಿಧಾನ ಪರಿಷತ್ ನ 25 ಸ್ಥಾನಗಳಿಗೆ ಡಿಸೆಂಬರ್ 10 ರಂದು ಮತದಾನ ನಡೆಯಲಿದೆ.  ಚುನಾವಣಾ ಅಕ್ರಮಗಳಿಗೆ ಕಡಿವಾಣ ಹಾಕಲು ಮೈಸೂರು ಜಿಲ್ಲೆಯಲ್ಲಿ 11 ಕಂಟ್ರೋಲ್ ರೂಂ ಸ್ಥಾಪನೆ ಮಾಡಲಾಗಿದ್ದು, ಚುನಾವಣೆಗೆ ಸಂಬಂಧ ಯಾವುದೇ ದೂರುಗಳಿದ್ದಲ್ಲಿ  ಕಂಟ್ರೋಲ್ ರೂಂಗೆ ತಿಳಿಸುವಂತೆ ಮನವಿ ಮಾಡಲಾಗಿದೆ.

ಈ ಕುರಿತು ಎಡಿಸಿ ಡಾ.ಬಿ.ಎಸ್.ಮಂಜುನಾಥಸ್ವಾಮಿ ಪ್ರಕಟಣೆ ಹೊರಡಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 1077 ಆಗಿದ್ದು, ಮೈಸೂರು ಉಪವಿಭಾಗಾಧಿಕಾರಿಗಳ ಕಚೇರಿಯ ದೂ.ಸಂ.0821-2422100, ಹುಣಸೂರು ಉಪವಿಭಾಗಾಧಿಕಾರಿಗಳ ಕಚೇರಿಯ ದೂ.ಸಂ.08222-252073, ಮೈಸೂರು ಪಾಲಿಕೆಯ ದೂ.ಸಂ.9449841195/9449841196,

ಪಿರಿಯಾಪಟ್ಟಣ ತಾಲ್ಲೂಕು ಕಚೇರಿಯ ದೂ.ಸಂ.08223-274175. ಕೆ.ಆರ್.ನಗರ ತಾಲ್ಲೂಕು ಕಚೇರಿಯ ದೂ.ಸಂ.08223-262371. ಹುಣಸೂರು ತಾಲ್ಲೂಕು ಕಚೇರಿಯ ದೂ.ಸಂ. 08222-252040. ಹೆಚ್.ಡಿ.ಕೋಟೆ ತಾಲ್ಲೂಕು ಕಚೇರಿಯ ದೂ.ಸಂ. 08228-255325. ನಂಜನಗೂಡು ತಾಲ್ಲೂಕು ಕಚೇರಿಯ ದೂ.ಸಂ.08221-223108. ಮೈಸೂರು ತಾಲ್ಲೂಕು ಕಚೇರಿಯ ದೂ.ಸಂ.0821-2414812. ಟಿ.ನರಸೀಪುರ ತಾಲ್ಲೂಕು ಕಚೇರಿಯ ದೂ.ಸಂ. 08227-260210, 261233 ಆಗಿದೆ. ಚುನಾವಣೆ ಸಂಬಂಧ ದೂರು ಹಾಗೂ ಮಾಹಿತಿಗಾಗಿ ಕಂಟ್ರೋಲ್ ಕರೆ ಮಾಡುವಂತೆ ಜಿಲ್ಲಾಡಳಿತ ಮನವಿ  ಮಾಡಿದೆ.

Key words: legislative election-11 Control Room – Mysore District

ENGLISH SUMMARY…

MLC elections: 11 control rooms established in Mysuru
Mysuru, November 18, 2021 (www.justkannada.in): The District Administration of Mysuru has started preparations for the MLC elections and has established 11 control rooms as part of its preparations.
The voting for 25 legislative council seats in the State will be held on December 10. The District Administration of Mysuru has established 11 control rooms to prevent any untoward incidents and activities. The public is requested to inform the control room in case if they see any such incidents happening.
In a press release, Dr. B.S. Manjunathaswamy, ADC, has provided the control room details: The Control room telephone No. of the Deputy Commissioner’s office is 1077, Assistant Commissioner’s office (082102422100), Hunasuru Assistant Commissioner’s Office (08222-252073), MCC (9449841195/ 9449841196).
Keywords: MLC elections/ Mysuru District Administration/ control rooms