Wednesday, November 11, 2026

Dasara Wishes

Happy Dasara
Home Cinema ಸುರೇಶ್ ರೈನಾ ಕುಟುಂಬಕ್ಕೆ ಆಕ್ಸಿಜನ್ ಸಿಲಿಂಡರ್ ರವಾನಿಸಿ ನೆರವಾದ ಸೋನು ಸೂದ್

ಸುರೇಶ್ ರೈನಾ ಕುಟುಂಬಕ್ಕೆ ಆಕ್ಸಿಜನ್ ಸಿಲಿಂಡರ್ ರವಾನಿಸಿ ನೆರವಾದ ಸೋನು ಸೂದ್

ಬೆಂಗಳೂರು, ಮೇ 07, 2021 (www.justkannada.in): ಖ್ಯಾತ ಕ್ರಿಕೆಟಿಗ ಸುರೇಶ್ ರೈನಾ ಕುಟುಂಬಕ್ಕೆ ಸೋನು ಸೂದ್ ನೆರವಾಗಿದ್ದಾರೆ.

ರೈನಾ ಚಿಕ್ಕಮ್ಮ ಆಕ್ಸಿಜನ್ ಸಿಲಿಂಡರ್ ಸಿಗದೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು. ಈ ಬಗ್ಗೆ ಸುರೇಶ್ ರೈನಾ ಟ್ವಿಟ್ಟರ್ ಮೂಲಕ ಸಹಾಯ ಕೋರಿದ್ದರು.

ಯುಪಿ ಸಿಎಂ ಯೋಗಿ ಆದಿತ್ಯನಾಥ್‌ಗೆ ಸಹಾಯ ಕೋರಿದ್ದರು ರೈನಾ. ಆದರೆ ಅವರು ನೆರವಿಗೆ ಬರಲಿಲ್ಲ. ಕೊನೆಗೆ ಆ ಟ್ವೀಟ್ ನೋಡಿದ ಸೋನು ಸೂದ್ 10 ನಿಮಿಷದಲ್ಲಿ ರೈನಾಗೆ ಸಿಲಿಂಡರ್ ವ್ಯವಸ್ಥೆ ಮಾಡಿಸಿಕೊಟ್ಟಿದ್ದಾರೆ.

ರೈನಾ ಟ್ವೀಟ್ ನೋಡಿದ ಸೋನು ಸೂದ್ ವಿಳಾಸ ನೀಡುವಂತೆ ಕೇಳಿಕೊಂಡು, ’10 ನಿಮಿಷದಲ್ಲೇ ಸಿಲಿಂಡರ್ ತಲುಪಲಿದೆ ಸಹೋದರ’ ಎಂದು ಭರವಸೆ ನೀಡಿದ್ದರು. ಅದರಂತೆ ನೆರವು ನೀಡಿದ್ದಾರೆ.