ಪತಂಜಲಿ ಯೋಗಪೀಠದಿಂದ ಕೊರೋನಾಗೆ ಮೊದಲ ಆರ್ಯುವೇದಿಕ್ ಔಷಧ ಸಂಶೋಧನೆ- ಬಾಬಾ ರಾಮ್ ದೇವ್…

ಹರಿದ್ವಾರ,ಜೂ,23,2020(www.justkannada.in): ದೇಶದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು, ಕೊರೊನಾ ವೈರಸ್ ಗೆ ವಿಶ್ವದ ಹಲವು ರಾಷ್ಟ್ರಗಳು ಔಷಧ ಕಂಡುಹಿಡಿಯಲು ಪ್ರಯತ್ನ ನಡೆಸುತ್ತಿರುವ ಹೊತ್ತಲ್ಲೇ ಪತಂಜಲಿ ಯೋಗಪೀಠ ಮೊದಲ ಆರ್ಯುವೇದಿಕ್ ಕೊರೊನಾ ಔಷಧ ಕೊರೊನಿಲ್ ನ್ನು  ಕಂಡುಹಿಡಿದಿದೆ.

ಈ ಕುರಿತು ಪತಂಜಲಿ ಯೋಗ ಪೀಠದಿಂದ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಲಾಯಿತು. ಈ ವೇಳೆ ಮಾತನಾಡಿದ ಬಾಬಾ ರಾಮ್ ದೇವ್, ಕೊರೋನಾ ಸೋಂಕಿಗೆ ಮೊದಲ ಆಯುರ್ವೇದಿಕ್  ಔಷಧಿ ಸಂಶೋಧನೆ ಮಾಡಲಾಗಿದೆ. ತಜ್ಞರು ವೈದ್ಯರು, ವಿಜ್ಞಾನಿಗಳು ಸೇರಿ ಔಷಧ ಸಂಶೋಧನೆ ಮಾಡಿದ್ದಾರೆ. ಕೊರೋನಿಲ್ ಔಷಧಿಯಿಂದ ಕೊರೋನಾಗೆ ಚಿಕಿತ್ಸೆ ನೀಡಬಹುದು ಎಂದು ಪತಂಜಲಿ ಯೋಗ ಪೀಠದ ತಿಳಿಸಿದರು.Treatment -Corona - Coronel –patanjali-baba ramdev

280 ಮಂದಿ ಸೋಂಕಿತರ ಮೇಲೆ ಈ ಔಷಧ ಪ್ರಯೋಗಿಸಲಾಗಿದೆ. ಇದರಲ್ಲಿ ಮೂರು ದಿನಗಳಲ್ಲಿ ಶೇ69 ರಷ್ಟು ಸೋಂಕಿತರು ಚೇತರಿಸಿಕೊಂಡಿದ್ದಾರೆ. 7 ದಿನಗಳಲ್ಲಿ ಶೇ.100ರಷ್ಟು ಸೋಂಕಿತರು ಚೇತರಿಸಿಕೊಂಡಿದ್ದಾರೆ.  ಹೀಗಾಗಿ ಕೊರೊನಾ ಚಿಕಿತ್ಸೆಗೆ ಕೊರೋನಿಲ್ ಬಳಸಬಹುದು ಎಂದು ರಾಮ್ ದೇವ್ ತಿಳಿಸಿದ್ದಾರೆ.

Key words: Treatment -Corona – Coronel –patanjali-baba ramdev