ಬ್ರಿಟನ್ ನಿಂದ ಬರುವ ವಿಮಾನಗಳಿಗೆ ನಿರ್ಬಂಧ ವಿಧಿಸಿದ ಕೇಂದ್ರ ಸರ್ಕಾರ…

ನವದೆಹಲಿ,ಡಿಸೆಂಬರ್,21,2020(www.justkannada.in):  ಇಂಗ್ಲೇಂಡ್ ನಲ್ಲಿ ರೂಪಾಂತರಗೊಂಡ ಕೊರೋನಾ ವೈರಸ್ ಪತ್ತೆಯಾದ ಹಿನ್ನೆಲೆ  ಬ್ರಿಟನ್ ನಿಂದ ಬರುವ ವಿಮಾನಗಳಿಗೆ ಡಿಸೆಂಬರ್ 31ರವರೆಗೆ ಕೇಂದ್ರ ಸರ್ಕಾರ ನಿರ್ಬಂಧ ವಿಧಿಸಿದೆ.Teachers,solve,problems,Government,bound,Minister,R.Ashok

ಇದೀಗ ಬ್ರಿಟನ್ ನಲ್ಲಿ ಹೊಸ ನಮೂನೆಯ ಕೊರೊನಾ ವೈರಸ್ ಪತ್ತೆಯಾಗಿದ್ದು, ಮತ್ತೆ ಆತಂಕ ಸೃಷ್ಟಿಯಾಗಿದೆ. ಹೀಗಾಗಿ ತಾತ್ಕಾಲಿಕವಾಗಿ ಬ್ರಿಟನ್ ನಿಂದ ಭಾರತಕ್ಕೆ ಬರುವ ವಿಮಾನಗಳನ್ನು ರದ್ದುಗೊಳಿಸಲಾಗಿದೆ.

ಲಂಡನ್‌ನಿಂದ ಭಾರತಕ್ಕೆ ಬರುವ ಎಲ್ಲಾ ವಿಮಾನಗಳಿಗೆ ಕೇಂದ್ರ ಸರ್ಕಾರ ಡಿಸೆಂಬರ್‌ 31ವರೆಗೆ  ನಿರ್ಬಂಧ ವಿಧಿಸಿದೆ.  ಈ ಹೊಸ ವೈರಸ್ ಪ್ರಸ್ತುತ ವೈರಸ್ ಗಿಂತ ಶೇ.70ರಷ್ಟು ಹೆಚ್ಚು ವೇಗವಾಗಿ ಹರಡಬಲ್ಲದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಪರಿಸ್ಥಿತಿ ಕೈ ಮೀರಿದೆ ಎಂದು ಬ್ರಿಟನ್ ಸರ್ಕಾರವೇ ಹೇಳಿದೆ.  ಈ ಹಿನ್ನೆಲೆ ಬ್ರಿಟನ್‌ನಿಂದ ಬರುವ ಎಲ್ಲಾ ವಿಮಾನಗಳನ್ನು ಯೂರೋಪ್ ಹಲವು ರಾಷ್ಟ್ರಗಳು ರದ್ದುಪಡಿಸಿವೆ ಎನ್ನಲಾಗಿದೆ.central-government-restricts-flights-britain

ಈ ಕುರಿತು ಮಾತನಾಡಿರುವ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್,  ಅತಿ ವೇಗವಾಗಿ ಹರಡಬಲ್ಲ ಈ ಹೊಸ ವಿಧದ ಸೋಂಕಿನ ಕುರಿತ ಚರ್ಚೆಗೆ ಕೇಂದ್ರ ಆರೋಗ್ಯ ಸಚಿವಾಲಯವು ಜಂಟಿ ಮೇಲ್ವಿಚಾರಣಾ ಸಮಿತಿ ತುರ್ತು ಸಭೆ ಕರೆದಿದೆ. ಆದರೆ ಈ ಸೋಂಕಿನ ಕುರಿತು ಭಾರತೀಯರು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

Key words:  central government- restricts- flights – Britain.