ಕೃತಕ ಹೊಟ್ಟೆ ನೋವು ಇದ್ದರೆ ವೈದ್ಯರಿಗೆ ಔಷಧಿ ಕೊಡಲು ಸಾಧ್ಯನಾ? ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು,ಡಿಸೆಂಬರ್,21,2020(www.justkannada.in) : ನಿಜವಾದ ಹೊಟ್ಟೆ ನೋವು ಇದ್ದರೆ ಔಷಧಿ ಕೊಡಬಹುದು ಆದರೆ, ಕೃತಕ ಹೊಟ್ಟೆ ನೋವು ಇದ್ದರೆ ವೈದ್ಯರಿಗೆ ಔಷಧಿ ಕೊಡಲು ಸಾಧ್ಯನಾ? ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಶಾಸಕ ಎಸ್.ಆರ್.ಶ್ರೀನಿವಾಸ್ ವಿರುದ್ಧ ಕಿಡಿಕಾರಿದ್ದಾರೆ.

Teachers,solve,problems,Government,bound,Minister,R.Ashok

ಗುಬ್ಬಿ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ವಿರುದ್ಧ ಕಿಡಿಕಾರಿದ ಅವರು ದೇವೇಗೌಡರ ಸೋಲಿಗೆ ಏನು ಹಾಗೂ ಯಾರು ಕಾರಣ ಎಂಬುವುದು ಚೆನ್ನಾಗಿ ಗೊತ್ತು ಎಂದು ತಿರುಗೇಟು ನೀಡಿದರು.

ಗುಬ್ಬಿ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಅವರು ಜೆಡಿಎಸ್ ಬಿಜೆಪಿ ಜೊತೆಗೆ ವಿಲೀನ ಆದ್ರೆ ಪಕ್ಷ ಬಿಡುವುದಾಗಿ ಎಚ್ಚರಿಕೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಎಚ್.ಡಿ.ಕುಮಾರಸ್ವಾಮಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ನೀವೆಲ್ಲಾ ಏನು ಮಾಡಿದ್ದಿರಿ, ಚುನಾವಣೆ ಯಾವ ರೀತಿಯಲ್ಲಿ ನಡೆಸಿದ್ದೀರಿ ಎಂದು ಗೊತ್ತಿದೆ. ನಮ್ಮ ಕುಟುಂಬಕ್ಕೆ ಸೋಲು ಹೊಸತೇನು ಅಲ್ಲ ಎಂದು ಉತ್ತರಿಸಿದ್ದಾರೆ.

ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋಲಿಸಲು ಜೆಡಿಎಸ್ ಬಿಜೆಪಿ ಜೊತೆಗೆ ಒಳಒಪ್ಪಂದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಒಳಒಪ್ಪಂದ ಮಾಡಿದ್ದು ಸತ್ಯ, ಆದರೆ, ಎಸ್.ಆರ್ ಶ್ರೀನಿವಾಸ್ ಅವರು  ಒಳಒಪ್ಪಂದ ಮಾಡಿದ್ದಾರೆ. ಅಲ್ಲಿ ನಮ್ಮ ಅಭ್ಯರ್ಥಿ ಸೋಲಲು ಹಾಗೂ ಬಿಜೆಪಿ ಅಭ್ಯರ್ಥಿ ಗೆಲ್ಲಲು ಶ್ರೀನಿವಾಸ್ ಕಾರಣ ಎಂದು ಕಿಡಿಕಾರಿದರು.

artificial-stomach-pain-Can-doctor-give-medicine?-Former CM-H.D.Kumaraswamy

ಶ್ರೀನಿವಾಸ್ ಅವರನ್ನು ಸಚಿವರನ್ನಾಗಿ ಮಾಡಿದ್ದೆ, ಅವರಿಗೆ ಸಣ್ಣ ಇಲಾಖೆ ಕೊಟ್ಟಿದ್ದೆ, ಆದ್ರೆ ಅವರು ಹಣಕಾಸುನಂತಹ ದೊಡ್ಡ ಇಲಾಖೆಯ ನಿರೀಕ್ಷೆಯಲ್ಲಿದ್ದರು. ಅವರು ಪಕ್ಷ ಬಿಟ್ಟು ಹೋಗುವುದಾದರೆ ಹೋಗಲಿ, ನಿಮ್ಮ ಸಂಬಂಧ ಯಾರ ಜೊತೆ ಇದೆ ಎಂದು ಗೊತ್ತು ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.

key words : artificial-stomach-pain-Can-doctor-give-medicine?-Former CM-H.D.Kumaraswamy