Tuesday, September 29, 2026

BDA Apartments

NICE Project BDA JK_Adv BDA Adv
Home Front Page ನೈಸ್ ಯೋಜನೆ:  AK-DK ಭಾಂದವ್ಯದಲ್ಲಿ 3 ಲಕ್ಷ ಕೋಟಿಗಿಂತ ಹೆಚ್ಚು ಅವ್ಯವಹಾರ- ಚರ್ಚೆಗೆ ಸಿಎಂಗೆ  ಹೆಚ್...

ನೈಸ್ ಯೋಜನೆ:  AK-DK ಭಾಂದವ್ಯದಲ್ಲಿ 3 ಲಕ್ಷ ಕೋಟಿಗಿಂತ ಹೆಚ್ಚು ಅವ್ಯವಹಾರ- ಚರ್ಚೆಗೆ ಸಿಎಂಗೆ  ಹೆಚ್ ಡಿಕೆ ಪಂಥಾಹ್ವಾನ

ಬೆಂಗಳೂರು,ಸೆಪ್ಟಂಬರ್,29,2026 (www.justkannada.in): ನೈಸ್ ಯೋಜನೆಯಲ್ಲಿ 3 ಲಕ್ಷ ಕೋಟಿಗಿಂತ ಹೆಚ್ಚು ಅವ್ಯವಹಾರ ನಡೆದಿದೆ. ಎಕೆ-ಡಿಕೆ ಬಾಂಧವ್ಯದಲ್ಲಿ 3 ಲಕ್ಷ ಕೋಟಿ ಗಿಂತ ಹೆಚ್ಚು ಅವ್ಯವಹಾರ ನಡೆದಿದೆ ಎಂದು ಅಶೋಕ್ ಖೇಣಿ ಮತ್ತು ಸಿಎಂ ಡಿಕೆ ಶಿವಕುಮಾರ್ ವಿರುದ್ದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.

ಈ ಸಂಬಂಧ ಇಂದು ಸುದ್ದಿಗೋಷ್ಠಿ ನಡೆಸಿ ಕೆಲ ದಾಖಲೆಗಳನ್ನ ಬಿಡುಗಡೆ ಮಾಡಿ ಮಾತನಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ,  ಇಷ್ಟೆಲ್ಲಾ ಅವ್ಯವಹಾರ ಮಾಡಿದ ಅಶೋಕ್ ಖೇಣಿಯನ್ನ ಒದ್ದು ಒಳಗೆ ಹಾಕಬೇಕು.  ಯಾರು ಕೂಡ ನೈಸ್ ಟೋಲ್ ಕಟ್ಟಬೇಡಿ ಸರ್ಕಾರ ಅದನ್ನ ಮೊದಲು ನಿಲ್ಲಿಸಲಿ  ನೈಸ್ ಯೋಜನೆಗೆ 1 ಲಕ್ಷ 24 ಸಾವಿರ ಕೆರೆ ನೋಟಿಫೈ ಮಾಡಿ ಇಟ್ಟಿದ್ದಾರೆ. 2004ರಲ್ಲೇ ಡಿನೋಟಿಫೈ ಮಾಡಿದ್ದಾರೆ ಇದನ್ನೆಲ್ಲಾ ಹೊಡೆಯಲು ಪ್ಲಾನ್ ಮಾಡಿದ್ದಾರೆ ಎಂದರು.NICE Project hdk-dks hdk dks

ನೈಸ್ ಯೋಜನೆ ಅಕ್ರಮದ ಬಗ್ಗೆ ವಿಧಾನಸೌಧದ ಮುಂಭಾಗದಲ್ಲೇ ಚರ್ಚೆಗೆ ಬರಲಿ ಎಂದು ಸಿಎಂ ಡಿಕೆ ಶಿವಕುಮಾರ್ ಅವರಿಗೆ ಕೇಂದ್ರ ಸಚಿವ ಹೆಚ್ ಡಿಕೆ ಪಂಥಾಹ್ವಾನ ನೀಡಿದರು.Central Minister hdk

ನೈಸ್ ಸಂಸ್ಥೆ ಅಕ್ರಮದ ಬಗ್ಗೆ ಕ್ರಮ ಕೈಗೊಳ್ಳುವ ಶಕ್ತಿ ಇಲ್ಲದಿದ್ದರೆ  ಡಿಕೆ ಶಿವಕುಮಾರ್  ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ ಮುಂದೆ ಸಿಎಂ ಆಗಿ ಬರುವವರು ಈ ಅಕ್ರಮದ ಬಗ್ಗ ನೋಡಿಕೊಳ್ಳುತ್ತಾರೆ ಎಂದರು.HDK challenges jk02

Key words: NICE Project, Central Minister, HDK challenges, CM DK Shivakumar, debate.

English Summary
Title

Kumaraswamy Challenges DK Shivakumar Over NICE Road Takeover Dispute

Short Description
Union Minister HD Kumaraswamy and Karnataka CM DK Shivakumar are locked in a fierce political battle over the controversial NICE Road project. Following recent Karnataka High Court rulings on project irregularities, Kumaraswamy has aggressively challenged Shivakumar to an open debate. The Union Minister demands an immediate government takeover of the infrastructure corridor and a halt to illegal toll collection. He further alleges a multi-crore benami scam involving shell companies. In response, Shivakumar has dismissed the allegations as politically motivated, stating that the state government will act strictly in accordance with the law while prioritizing Bengaluru's ongoing infrastructure and economic growth.
Keywords
NICE Project, Central Minister, HDK challenges, CM DK Shivakumar, debate