ಉತ್ತರ ಕರ್ನಾಟಕ ಸ್ಥಿತಿ ನೋಡಿದ್ರೆ ರಕ್ತ ಕುದಿಯುತ್ತೆ- ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಎಎಸ್ ಪಾಟೀಲ್ ನಡಹಳ್ಳಿ ಆಕ್ರೋಶ.

ಬೆಳಗಾವಿ,ಡಿಸೆಂಬರ್,24,2021(www.justkannada.in): ಉತ್ತರ ಕರ್ನಾಟಕ ಸ್ಥಿತಿ ನೋಡಿದ್ರೆ ರಕ್ತ ಕುದಿಯುತ್ತೆ. ನಾವು ಯಾವುದೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ ಕೇಳುತ್ತಿಲ್ಲ,  ನಾವು ಕೇಳುತ್ತಿರುವುದು ನಮ್ಮ ಭಾಗದ ಜನರಿಗೆ ಅನ್ನವನ್ನಷ್ಟೇ ಎಂದು ಬಿಜೆಪಿ ಶಾಸಕ ಎಎಸ್ ಪಾಟೀಲ್ ನಡಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸಭೆ ಕಲಾಪದಲ್ಲಿ ಇಂದು ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುತ್ತಿದ್ದು ಈ ವೇಳೆ ಮಾತನಾಡಿದ ಶಾಸಕ ಎಎಸ್ ಪಾಟೀಲ್ ನಡಹಳ್ಳಿ, ಉತ್ತರ ಕರ್ನಾಟಕದ ಈ ಸ್ಥಿತಿಗೆ ನಾವು ಧ್ವನಿ ಎತ್ತದಿರುವುದೇ ಕಾರಣ.  ಧ್ವನಿ ಎತ್ತಿದರೇ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಸಿಗುವುದಿಲ್ಲ ಅಧಿಕಾರ ಸಿಗುವುದಿಲ್ಲ ಎಂಬ ಆತಂಕದಿಂದ ಮಾತನಾಡುತ್ತಿಲ್ಲ.  ಉತ್ತರ ಕರ್ನಾಟಕ ಪರಿಸ್ಥಿತಿ ಯೋಜನೆ ಮಾಡಿದರೇ ರಕ್ತ ಕುದಿಯುತ್ತದೆ ಎಂದರು.

ಮಾತು ನಿರ್ಣಯಗಳು ಹೃದಯದಿಂದ ಬರಬೇಕು. ನಾನು ರಾಜಕಾರಣ ಮೀರಿ ಮಾತನಾಡುತ್ತಿದ್ದೇನೆ. ನಟನೆಗೆ ಪ್ರಶಸ್ತಿ ಕೊಟ್ಟರೇ ರಾಜಕಾರಣಿಗಳಿಗೆ ಮೊದಲ ಪ್ರಶಸ್ತಿ ಬರುತ್ತದೆ. ನೊಬೆಲ್ ಪ್ರಶಸ್ತಿಯೂ ಬರಬಹುದು.  ಮುಂದಿನ ಅಧಿವೇಶನದಲ್ಲಿ ಪೂರ್ತಿ ಉತ್ತರ ಕರ್ನಾಟಕಕ್ಕೆ ಮೀಸಲಿಡಿ. ಉತ್ತರ ಕರ್ನಾಟಕ  ಸಮಸ್ಯೆಗಳ ಸಂಬಂಧ ಕೇಂದ್ರ ಸರ್ಕಾರಕ್ಕೆ ನಿಯೋಗ ಕೊಂಡೊಯ್ಯಬೇಕು. ವಿದರ್ಭ ಮಾದರಿಯಲ್ಲಿ ಕರ್ನಾಟಕಕ್ಕೆ ಅನುದಾನ ನೀಡಬೇಕು ಎಂದು ಶಾಸಕ ಎಎಸ್ ಪಾಟೀಲ್ ನಡಹಳ್ಳಿ ಆಗ್ರಹಿಸಿದರು.

Key words: Blood -boils – North Karnataka-BJP –MLA- AS Patil Nadahalli -outrage